ಕೈಕಂಬ : ಕಾಂಗ್ರೆಸ್ ಲೆಟರ್‌ಹೆಡ್ ಸರ್ಕಾರ. ವಿಧಾನಸೌಧ, ಸರ್ಕಾರಿ ಕಚೇರಿಗಳಿಗೆ ಹೋದರೆ ಕಾಂಗ್ರೆಸ್ ನಾಯಕರ ಲೆಟರ್‌ಹೆಡ್ ಹಾವಳಿ. ಜನವಿರೋಧಿ, ಅದಲ್ಲೂ ಹಿಂದೂ ವಿರೋಧಿಯಾಗಿರುವ ಈ ಸರ್ಕಾರದಲ್ಲಿ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಬಿಜೆಪಿ ಶಾಸಕರು ಹೆಚ್ಚಿರುವ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಮಲತಾಯಿ ಧೋರಣೆಗೆ ಹೇತುವಾಗಿದೆ. ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬೃಜೇಶ್ ಚೌಟ ಆರೋಪಿಸಿದರು.

ಗುರುಪುರ ಗ್ರಾಮ ಪಂಚಾಯತ್ ಕಚೇರಿ ಎದುರು ಸರ್ಕಾರದ ನೀತಿ ವಿರುದ್ಧ ಜೂ. ೨೩ರಂದು ಬಿಜೆಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, `ಗ್ಯಾರಂಟಿ’ ಹೇಳಿಕೊಂಡು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈಗ ಜನರಿಗೆ ಕಂಟಕವಾಗಿದೆ, ಗ್ಯಾರಂಟಿ ಮೋಸ ಮಾಡುತ್ತಿದೆ. ವಿದ್ಯುತ್ ದರದಲ್ಲಿ ಏರಿಕೆ, ಏಕವಿನ್ಯಾಸ ಲೇಔಟ್ ಮತ್ತು ೯/೧೧ ಸಮಸ್ಯೆ ಜಟಿಲಗೊಂಡಿದ್ದು, ಅಧಿಕಾರಿಗಳು ಲಂಚಕೋರರಾಗುತ್ತಿದ್ದಾರೆ. ಸೋತ ಕಾಂಗ್ರೆಸ್ ನಾಯಕರ ಕೆಲಸ ಮಾಡುತ್ತಿರುವ ಈ ಸರ್ಕಾರ ಎಸ್‌ಡಿಪಿಐಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ನಿಷೇಧಿತ ಪಿಎಫ್‌ಐಗಾಗಿ ಸಂವಿಧಾನ ವಿರೋಧಿ, ಹಿಂದೂ ವಿರೋಧ ಕೆಲಸ ಮುಂದುವರಿಸಿದೆ. ಫ್ರೀ ಎಂದು ಜನರಿಗೆ ಒಂದು ಕೈಯಲ್ಲಿ ಕೊಟ್ಟಿರುವ ಕಾಂಗ್ರೆಸ್ ಅದನ್ನು ಎರಡು ಕೈಯಿಂದ ಹಿಂಪಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.

ಪAಚಾಯತ್ ಸದಸ್ಯ ಸುನಿಲ್ ಪೂಜಾರಿ ಜಲ್ಲಿಗುಡ್ಡೆ ಅವರು ಕಾಂಗ್ರೆಸ್ ಸರ್ಕಾರದ ಜನವಿರೋಧಿ ಯೋಜನೆಗಳ ಪಟ್ಟಿ ಪ್ರಸ್ತಾವಿಸುತ್ತ, ಜನಪರವಾಗಿ ಕೆಲಸ ಮಾಡಬೇಕಿದ್ದ ಪಂಚಾಯತ್ ಕಾರ್ಯವೈಖರಿ ಕಾಂಗ್ರೆಸ್ ನಿರ್ದೇಶನದಡಿ ನಿಷ್ಕಿçಯಗೊಂಡಿದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾಕ್ಕೆ ಹಣ ಇಲ್ಲದ ಈ ಸರ್ಕಾರ ಅಬಕಾರಿ ಹಣದಿಂದ ಉಸಿರಾಡುತ್ತಿದೆ. ಪಂಚಾಯತ್‌ನಿAದ ಆಗುತ್ತಿದ್ದ ಕೆಲಸಗಳಿಗೆ ಮೂಡಾಕ್ಕೆ ಹೋಗಬೇಕು. ಒಂದು ವಾರದ ಕೆಲಸಕ್ಕೆ ನಾಲ್ಕೆÊದು ತಿಂಗಳು ಕಾಯಬೇಕಿದೆ. ಇದು ಜನವಿರೋಧಿ, ರೈತ ವಿರೋಧಿ ಸರ್ಕಾರ ಎಂದರು.

ಪ್ರತಿಭಟನಾ ಸಭೆ ಬಳಿಕ ಸಂಸದ ಹಾಗೂ ಬಿಜೆಪಿಯ ಗುರುಪುರ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕರ ವಿ. ಶೆಟ್ಟಿ ನೇತೃತ್ವದ ಬಿಜೆಪಿ ನಿಯೋಗವು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪಂಕಜಾ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಸಚಿನ್ ಅಡಪ, ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ಶಶಿಕಲಾ, ಛಾಯಾ, ನಳಿನಿ ಶೆಟ್ಟಿ, ಹರೀಶ್ ಬಳ್ಳಿ, ಬಿಜೆಪಿ ಪ್ರಮುಖರಾದ ಸುಧೀರ್ ಕಾಮತ್, ಸಿದ್ದಿಕ್ ಅಡ್ಡೂರು, ರವೀಂದ್ರ ಶೆಟ್ಟಿ, ಲತಾ ಆರ್. ಶೆಟ್ಟಿ, ಸಚಿನ್ ಶೆಟ್ಟಿ, ಸತೀಶ್ ಕಾವ, ಜಿ. ಕೆ. ಸಂದೇಶ್, ಜಿ. ಕೆ. ನರಸಿಂಹ ಪೂಜಾರಿ, ಹೇಮಚಂದ್ರ, ವಸಂತ ಸುವರ್ಣ, ರಾಜೇಶ್ ಶೆಟ್ಟಿ, ವಿನಯ್, ಸೇಸಮ್ಮ, ಜಲಜಾ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಇದ್ದರು. ವಿಜೆ ಮಧುರಾಜ್‌ ಕಾರ್ಯಕ್ರಮನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *