ಪೊಳಲಿ:ಸರಕಾರಿ ಪ್ರೌಢಶಾಲೆ ಪೊಳಲಿಯ ವಿದ್ಯಾರ್ಥಿಗಳಿಂದ ರಾಮಕೃಷ್ಣ ತಪೋವನದಲ್ಲಿ 21ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೇತನ್ಯಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಅಂತರಾಷ್ಟ್ರೀಯ ಯೋಗ ದಿನ ೨೦೨೫ರ ಘೋಷವಾಕ್ಯ ಒಂದು ಭೂಮಿ, ಒಂದು ಆರೋಗ್ಯ – ಯೋಗ. ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ವಿದ್ಯೆ ಭಾರತದಲ್ಲಿ ಜನ್ಮ ತಾಳಿದ್ದು ಅದನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಜೂ.21ರಂದು ವಿಶ್ವದಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಅದನ್ನು ನಾವು ಮುನ್ನಡೆಸಬೇಕು ಎಂದು ಸ್ವಾಮಿ ವಿವೇಕ ಚೇತನ್ಯಾನಂದ ಸ್ವಾಮೀಜಿ ಹೇಳಿ ಶುಭ ಹಾರೈಸಿದರು.


ದೈಹಿಕ ಶಿಕ್ಷಣ ಶಿಕ್ಷಕರಾದ ಜಯಂತ್ ಸರ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಪೊಳಲಿ ಘಟಕದ ಸದಸ್ಯರಾದ ಕೇಶವ ಪೊಳಲಿ, ನಿಶಾ , ರಾಜೇಶ್ವರಿ, ಇವರು ನ ವಿದ್ಯಾರ್ಥಿಗಳಿಗೆ ಯೋಗದ ಪ್ರತ್ಯಕ್ಷಿತೆಯನ್ನು ನೀಡಿದರು.

By suddi9

Leave a Reply

Your email address will not be published. Required fields are marked *