ಬಂಟ್ವಾಳ: ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ಸಂಚಾಲಕರಾದ ಬಿ.ಸುರೇಶ್ ವಿ. ಬಾಳಿಗಾ ಇವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಯೊಗದ ಪ್ರತಿಜ್ಞೆ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಸುಮಾರು ೬೦೦ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು. ಪತಂಜಲಿ ಯೋಗ ಕೇಂದ್ರದ ಸದಸ್ಯರಾದ ಉಮೇಶ್, ಗೀತಾ, ಸುರೇಖಾ, ವಿನಯ, ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶನ ನೀಡಿದರು. ಶಿಕ್ಷಕರು ಸಹಕರಿಸಿದರು.
ಶಾಲಾ ಅಡಳಿತಮಂಡಳಿಯ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ, ಸಹ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್ ಇವರು ಉಪಸ್ಥಿತರಿದ್ದರು.
