ಸುದ್ದಿ9  ಮೂಡುಬಿದಿರೆ: ಇಂಜಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಮೂಡುಬಿದಿರೆ: ತೃತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ   ಕೆರೆಬಸದಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಮಧ್ಯಾಹ್ನ ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತೋಡಾರಿನ ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ತೃತೀಯ ಬಿ.ಇ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ  ಪವನ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ  ಈತ ಚಿಕ್ಕಮಗಳೂರಿನ ವಾಸುದೇವ ಆಚಾರ್ಯ ನಾಲ್ಕು ಜನ ಮಕ್ಕಳಲ್ಲಿ ಕಿರಿಯವ ಹಾಗೂ ಏಕೈಕ ಪುತ್ರನಾಗಿದ್ದಾನೆ.
ಘಟನೆ ವಿವರ: ಕಳೆದ ಜುಲೈ ತಿಂಗಳಿನಿಂದ ಪವನ್ ಕೆರೆಬಸದಿಯ ಹತ್ತಿರದ ಗೋಪಾಲಕೃಷ್ಣ ದೇವಸ್ಥಾನದ ಹಿಂದುಗಡೆಯಿದ್ದ ಶಾಂತಿಪ್ರಕಾಶ್ ಎಂಬವರ ಮನೆಯ ಹಿಂದುಗಡೆಯಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸೌಮ್ಯ ಸ್ವಭಾವ ಹಾಗೂ ಅಂತಮುಖರ್ಿಯಾಗಿದ್ದ. ಈತ ಬುಧವಾರ ಕಾಲೇಜಿಗೆ ತೆರಳದೇ ತಾನು ವಾಸಿಸುತ್ತಿದ್ದ ಕೋನೆಯಲ್ಲಿ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ವಿಫಲವಾದಾಗ ಶಾಂತಿಪ್ರಕಾಶ್ ಅವರ ಮನೆಯ ಎದುರುಗಡೆಯಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಪ್ರತಿಭ ಎಂಬವರು ಮಧ್ಯಾಹ್ನ ಬಂದು ನೋಡಿದಾಗ ಬಾವಿಗೆ ಹಾಕಿದ ಕಬ್ಬಿಣದ ಬಲೆಗಳನ್ನು ತೆಗೆಯಲಾಗಿತ್ತು. ಬಾವಿ ಹತ್ತಿ ಹೋಗಿ ಗಮನಿಸಿದಾಗ ಬಾವಿಗೆ ಹಾರಿರುವುದು ತಿಳಿದುಬಂದಿದೆ. ಕೂಡಲೇ ಆಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅದಾಗಲೇ ಪವನ್ ಮೃತಪಟ್ಟಿದ್ದಾನೆ.

 

DSC00731

DSC00734

DSC00735

ಕಾಲೇಜಿನಲ್ಲಿ ಪರೀಕ್ಷೆ ಸಂಬಂಧಪಟ್ಟಂತೆ ಗೊಂದಲವೊಂದು ಉಂಟಾಗಿದ್ದು, ಇದರಿಂದಾಗಿ ಆತ್ಮೆಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *