ಬಂಟ್ವಾಳ: ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಯ ಜೀರ್ಣೋ ದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ರೂ. 10 ಲಕ್ಷ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಅವರು ಸುದರ್ಶನ ಜೈನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ರತ್ನವರ್ಮ ಇಂದ್ರ, ವಿದ್ಯಾ ಕುಮಾರ್, ನೇಮಿರಾಜ್ ಜೈನ್, ಭರತ್ ಕುಮಾರ್, ಜಿತೇಶ್ ಕುಮಾರ್, ಬಂಟ್ವಾಳ ಯೋಜನಾಧಿಕಾರಿ ಕುಮಾರಿ ಸುನೀತಾ ನಾಯಕ್, ಮೇಲ್ವಿಚಾರಕ ವಿನಾಯಕ ಗುಣಗ, ಒಕ್ಕೂಟದ ಉಪಾಧ್ಯಕ್ಷ ದಿನೇಶ್ ಮತ್ತು ಸಚಿನ್ ಉಪಸ್ಥಿತರಿದ್ದರು.

