ಅಮ್ಮುಂಜೆ: ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಾಯಶ್ಚಿತ್ತದ ಬಗ್ಗೆ, ಜೂ. 22ರಂದು ಭಾನುವಾರ ಬೆಳಿಗ್ಗೆ ಘಂಟೆ 8.30 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದಲ್ಲಿ ಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಶ್ರೀ ಶಶಿಧರ ಭಟ್ ಇವರ ಉಪಸ್ಥಿಯಲ್ಲಿ ಮೃತ್ಯುಂಜಯ ಹೋಮವು ಜರಗಲಿದೆ.

ಈ ದೇವತಾ ಕಾರ್ಯಕ್ಕೆ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಾಧಿಗಳು ಮೃತ್ಯುಂಜಯ ಹೋಮಕ್ಕೆ ಅಗತ್ಯವಾಗಿ ಬೇಕಾದ ಗರಿಕೆ, ಹೂ, ಹಿಂಗಾರ, ಬಾಳೆಹಣ್ಣು ಮತ್ತು ದನದ ತುಪ್ಪ ನೀಡಿ ಸಹಕರಿಸುವಂತೆ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ
