ಕೈಕಂಬ:ಕಂದಾವರ ಬೈಲು ಮಾಗಣೆ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರದ ಬಾಳಿಕೆಬೆಟ್ಟು ರಾಣ್ಯ ಸಮುದಾಯದವರು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಮಹಮ್ಮಾಯಿದೇವಿ ಪರಿವಾರ ದೈವಗಳ ಸಾನಿಧ್ಯವು ಪ್ರತಿಷ್ಠಿತ ಕಂದಾವರ ಬಾಳಿಕೆ ಮನೆತನದ ಜಾಗಕ್ಕೆ ಸೇರಿದ್ದು ಈ ದೇವಾಲಯದ ಜೀರ್ಣೋದ್ದಾರ ಪುನರ್ ನಿರ್ಮಾಣ ಕಾರ್ಯ ಪ್ರಾರಂಭಗೊಂಡು ಸುಮಾರು ಹತ್ತು ವರ್ಷಗಳಿಂದ ವಿವಿಧ ಕಾರಣಗಳಿಂದ ಸ್ಥಗಿತಗೊಂಡು.

ಒಂದು ವರ್ಷದ ಹಿಂದೆ ಸ್ಥಳದಲ್ಲಿ ಆರೂಢ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಸ್ಥಗಿತಗೊಂಡಿದ್ದ ಸಾನಿಧ್ಯವನ್ನು ಶೀಘ್ರದಲ್ಲಿ ಜೀಣೋಧ್ದಾರ ಪುನರ್ ನಿರ್ಮಾಣ ಮಾಡಲು ಜ್ಯೋತಿಷಿಯರ ಮೂಖಾಂತರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಊರಿನ ಪ್ರಮುಖರು ಜೀರ್ಣೋದ್ಧಾರ ಮಾಡಲು ತಯಾರಾಗಿದ್ದಾರೆ.
ಜೂ.೨೨ರಂದು ಭಾನುವಾರ ಮಂಗಳೂರು ಉತ್ತರ ಶಾಸಕ ಡಾ.ವೈಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ , ಸುರೇಶ್ ಭಟ್ ಕಂದಾವರ, ಶ್ರೀಧರ ಆಳ್ವ ಕಂದಾವರ ಬಾಳಿಕೆ ,ಸುಬ್ರಹ್ಮಣ್ಯ ಮಾರ್ಲಮತ್ತು ಶ್ರೀಮತಿ ಸೀತಾಲಕ್ಷ್ಮೀ ಸೇನವ ಕಂದಾವರ ಬಾಳಿಕೆ, ಅನಂತರಾಮ್ ಆಳ್ವ ಕಂದಾವರ ಬಾಳಿಕೆ, ವಿಠಲದಾಸ್ ಹೆಗ್ಡೆ ಕಂದಾವರ ಬಾಳಿಕೆ, ಸೀತಾರಾಮ ರಾಣ್ಯ ಬಾಳಿಕೆಬೆಟ್ಟು ಕಂದಾವರ , ಶ್ರೀ ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ದೋಬಯ್ಯ ಬಾಳಿಕೆಬೆಟ್ಟು ಕಂದಾವರ , ಮತ್ತು ಸರ್ವ ಸದಸ್ಯರು ಬಾಳಿಕೆಬೆಟ್ಟು ಕಂದಾವರ ಉಪಸ್ಥಿತರಿರುವರು.
