ಬಂಟ್ವಾಳ: ಇಲ್ಲಿನ ಕ್ಷೇತ್ರ ಶಿಕ್ಷಣ ಇಲಾಖಾ ವತಿಯಿಂದ ಬಿ.ಸಿ.ರೋಡಿನ ಕೊಡಂಗೆ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  2026 27 ನೇ ಸಾಲಿನ ತಾಲೂಕು ಹಂತದ ದಾಖಲಾತಿ ಆಂದೋಲನ  ಕಾರ್ಯಕ್ರಮಕ್ಜೆ ಶುಕ್ರವಾರ ಚಾಲನೆ ನೀಡಲಾಯಿತು.ಬಂಟ್ವಾಳಕ್ಷೇತ್ರ ಪ್ರಭಾರ  ಶಿಕ್ಷಣಾಧಿಕಾರಿಗಳಾದ  ಮಾಲತಿಯವರು ಸರ್ಕಾರದ ಈ ಮಹತ್ವಕಾಂಕ್ಷೆಯ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರಲ್ಲದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕ ಕ್ರಿಯಾಯೋಜನೆ ರೂಪಿಸಲು ಮಾರ್ಗದರ್ಶನ ನೀಡಿದರು.

ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿಗಳಾದ  ವಿದ್ಯಾ, ಶಿಕ್ಷಣ ಸಂಯೋಜಕರಾದ ಪ್ರತಿಮಾ ಮತ್ರು ಸುಧಾ,ಕೊಡಂಗೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸುಧೀರ್ ಜಿ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಎಸ್ .ಡಿ. ಎಂ.ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಪಾಲಕರು  ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭ ಸ್ಥಳೀಯ ಪರಿಸರದಲ್ಲಿ ಜಾಥ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮನವೊಲಿಸಲಾಯಿತು.
ಕೊಡಂಗೆ ಶಾಲೆಯ ವಿವಿಧ ತರಗತಿಗಳಿಗೆ ಈವರೆಗೆ 65 ಮಕ್ಕಳು ದಾಖಲಾಗಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಸುಗುಣ ರವರು  ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *