ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರೋಬೋಟಿಕ್ ಕೋಡಿಂಗ್ ತರಗತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕಾಯ೯ಕ್ರಮವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷರು  ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟಿಸಿ ಮಾತನಾಡಿ “ಒಳ್ಳೆಯದರಿಂದ ಒಳ್ಳೆಯ ಕಡೆಗೆ ಎನ್ನುವಂತೆ ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದಲ್ಲಿ ಡ್ರೀಮ್ ಕಿಟ್ ವತಿಯಿಂದ ಈ ತರಬೇತಿಯನ್ನು ನೀಡಲಾಗುತ್ತದೆ.ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ನಮ್ಮ ಧರ್ಮ, ಸಂಸ್ಕೃತಿಯನ್ನು ಇಟ್ಟುಕೊಂಡು  ಇಂದಿನ ಸವಾಲುಗಳನ್ನು ಎದುರಿಸಿ ವೈಜ್ಞಾನಿಕವಾಗಿ  ಮುಂದೆ ಬರಬೇಕು. ಈ ನಿಟ್ಟಿನಲ್ಲಿ  ರೋಬೋಟಿಕ್ ತಯಾರಿಕ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದ ಅವರು ಈ ವಿದ್ಯಾಸಂಸ್ಥೆಯಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿರುವುದರಿಂದ ಈ ರೋಬೋಟಿಕ್ ತಂತ್ರಜ್ಞಾನದ ತರಬೇತಿ ದೊರಕಬೇಕು, ವಿಜ್ಞಾನದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನ ಮಾಡಬೇಕೆಂಬುದು ನಮ್ಮೆಲ್ಲರ ಅಶಯವಾಗಿದೆ ಎಂದರು.  

 ಮಾನವ ನಿರ್ಮಿತ ರೋಬೋಟ್ ಗೆ ಚಾಲನೆ ನೀಡುವುದರ ಮೂಲಕ,  ರೋಬೋಟಿಕ್ ಕೋಡಿಂಗ್ ತರಬೇತಿ ತರಗತಿಯನ್ನು ಆರಂಭಿಸಲಾಯಿತು.

 ಡ್ರೀಮ್ ಕಿಟ್ ಕೋ ಫೌಂಡರ್ ಮತ್ತು ಪ್ರೊಡಕ್ಟ್ ಡಿಸೈನರ್ ಆಕರ್ಷ್ ಶೆಟ್ಟಿ, ಟ್ರೈನಿಂಗ್ ಮ್ಯಾನೇಜರ್ ಶ್ರವಣ್ ಯು, ಟ್ರೈನರ್ ಶ್ರೇಯಸ್, ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಕ್ಷಯ್,  ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಸತ್ಯರಾಜ್ ಕಾರ್ಯನಿರ್ವಹಣಾಧಿಕಾರಿ ಸಚಿತ್, ಮಾಧ್ಯಮ ಮಿತ್ರರು ಪವನ್ ರೈ, ಡಾ. ಕಮಲಾ ಪ್ರಭಾಕರ ಭಟ್ , ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

 ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ, ಸಾನ್ವಿ ವಂದಿಸಿದರು.ತನ್ಮಯಿ ರೈ ನಿರೂಪಿಸಿ,

By suddi9

Leave a Reply

Your email address will not be published. Required fields are marked *