ಬಂಟ್ವಾಳ: ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಬೊಳ್ಳಾಯಿ, ಸಜಿಪಮೂಡ ಇದರ ವತಿಯಿಂದ ಸಿಬ್ಬಂದಿಗಳಿಗೆ  ಮಾಹಿತಿ ಕಾರ್ಯಾಗಾರವು ಸುಭಾಸ್ ನಗರದಲ್ಲಿರುವ “ಶ್ರೀಗುರು ಕಲ್ಯಾಣ ಮಂಟಪ”ದಲ್ಲಿ ಶನಿವಾರ ನಡೆಯಿತು.

ಶ್ರೀಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಕೆ  ಹರಿಕೃಷ್ಣ ಬಂಟ್ವಾಳ ಅವರು ಕಾರ್ಯಾಗಾರವನ್ನು  ಉದ್ಘಾಟಿಸಿ ಮಾತನಾಡಿ,ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಗಳ ಪಾತ್ರ ಮಹತ್ತರವಾಗಿದೆ.ಸಿಬ್ಬಂದಿಗಳು ಇಂತಹ ಕಾರ್ಯಾಗಾರದಲ್ಲಿ ಸಿಗುವಂತ ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಂಡು ಗ್ರಾಹಕರಿಗೆ  ನಗುಮುಖದ ಸೇವೆಯನ್ನು ನೀಡಬೇಕು ಎಂದರು.
ಸಂಘದ ಅಧ್ಯಕ್ಷರಾದ  ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಎಸ್ .ಡಿ .ಸಿ .ಸಿ ಬ್ಯಾಂಕ್ ನ ನಿವೃತ್ತ ಸಿ.ಇ.ಒ
  ವಿಶ್ವನಾಥ್ ನಾಯರ್  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಠ್ಠಲ ಬೆಳ್ಚಡ ಚೇಳೂರು,ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಚಿದಾನಂದ ಎಂ ಕಡೇಶ್ವಾಲ್ಯ, ಅರುಣ್ ಕುಮಾರ್ ಎಂ, ಆಶೀಶ್ ಪೂಜಾರಿ,
ಕೆ ಸುಜಾತ ಎಂ, ವಾಣಿ ವಸಂತ್, ಸಿ.ಇ.ಒ ಮಮತಾ.ಜಿ, ಶ್ರೀಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿ.ಇ.ಒ ಚರಣ್ ಕುಮಾರ್, ಮೂರ್ತೆದಾರರ ಮಹಾಮಂಡಲದ ಸಿ.ಇ.ಒ ಕಿಶೋರ್ ಕುಮಾರ್,  ಶಿವಗಿರಿ ಮಹಿಳಾ ಸೊಸೈಟಿಯ ನಿರ್ದೇಶಕರಾದ ಅಭಿನಯ ಚಿದಾನಂದ್,  ಸಿ.ಇ.ಒ ರೇಖಾ, ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು 

By suddi9

Leave a Reply

Your email address will not be published. Required fields are marked *