ಜೀರ್ಣೋದ್ಧಾರ ಪ್ರಯುಕ್ತ ವಿಶೇಷ ಪೂಜೆ

ಕೈಕಂಬ : ಜೀರ್ಣೋದ್ಧಾರಗೊಳ್ಳಲಿರುವ ಅತಿ ಹಳೆಯದಾದ ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ನೀಲಕಂಠ ದೇವರ ಸಾನಿಧ್ಯದಲ್ಲಿ ಜೂ. ೧೩ರಂದು ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಗಣಹೋಮ ನಡೆದ ಬಳಿಕ ಗಣಪತಿ ದೇವರಿಗೆ ಅಪ್ಪದ ಪೂಜೆ, ನೀಲಕಂಠ ದೇವರಿಗೆ ಸೀಯಾಳಾಭಿಷೇಕ, ಏಕಾದಶ ರುದ್ರ ಪಾರಾಯಣ ಸಹಿತ ರುದ್ರಾಭಿಷೇಕ ಹಾಗೂ ಅಪರಾಹ್ನ ೧ಕ್ಕೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದುರ್ಗಾ ನಮಸ್ಕಾರ ಪೂಜೆ ನಡೆದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂಪರ್ತಣೆ ನಡೆಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಅಡಪ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಊರ ಹಾಗೂ ಪರವೂರ ನೂರಾರು ಭಕ್ತರು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *