ಬಂಟ್ವಾಳ : ಇಲ್ಲಿನ ವಿವಿಧ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಬಂದಿರುವ ಮೂವರು ನ್ಯಾಯಾಧೀಶರನ್ನು ಬಂಟ್ವಾಳ ವಕೀಲರ ಸಂಘ (ರಿ)ದ ವತಿಯಿಂದ ಸ್ವಾಗತಿಸಲಾಯಿತು.

ನೆಲಮಂಗಲ ನ್ಯಾಯಾಲಯದಿಂದ ಬಂಟ್ವಾಳದ ಸೀನಿಯರ್ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ.ಗೆ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಅನಿಲ್ ಪ್ರಕಾಶ್ ಎಂ.ಪಿ. ಮತ್ತು ತುಮಕೂರಿನ ನ್ಯಾಯಾ ಲಯದಿಂದ ಬಂಟ್ವಾಳದಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿ ಬಂದ ರಾಜೇಂದ್ರ ಪ್ರಸಾದ್ ಹಾಗೂ ಬಂಟ್ವಾಳಹೆಚ್ಚುವರಿ ಸಿವಿಲ್ ಮತ್ತುಜೆ.ಎಮ್ ಎಫ್.ಸಿ.ನ್ಯಾಯಾಲದಿಂದ ಬಂಟ್ವಾಳ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್.ಅವರನ್ನುಬಂಟ್ವಾಳ ವಕೀಲರ ಸಂಘದ ಕಛೇರಿ ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ವಾಗತಿಸಲಾಯಿತು.

ಈ ಸಂದರ್ಭಸೀನಿಯರ್ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ ಮಾತನಾಡಿ, ನ್ಯಾಯಾಲಯದಲ್ಲಿರುವ ಹೆಚ್ಚು,ಹೆಚ್ಚು ಪ್ರಕರಣಗಳು ಆದಷ್ಟು ಶೀಘ್ರವಾಗಿ ಇತ್ಯರ್ಥವಾಗುವ ನಿಟ್ಟಿನಲ್ಲಿ ಎಲ್ಲಾ ವಕೀಲರ ಸಹಕರಿಸಬೇಕಲ್ಲದೆ ಸಹೋದರ ನ್ಯಾಯಾಧೀಶರಿಗೂ ಸಹಕರಿಸಬೇಕೆಂದರು.
ವಕೀಲರ ಸಂಘ(ರಿ), ಬಂಟ್ವಾಳ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ರಥದ ಎರಡು ಚಕ್ರಗಳಿದ್ದಂತೆ. ವಕೀಲರ ಸಂಘವು ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಕೆ. ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು.ರಾಧಿಕಾ ವಂದಿಸಿದರು.ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
