ಬಂಟ್ವಾಳ: ಪಾಣೆಮಂಗಳೂರು ಜೈನರ ಪೇಟೆಯ ಪುರಾತನ ಭ.೧೦೦೮ ಶ್ರೀ ಅನಂತನಾಥ ತೀರ್ಥಂಕರ, ಭ.೧೦೦೮ ಶ್ರೀ ಚಂದ್ರನಾಥ ತೀರ್ಥಂಕರ, ಮಹಾ ಮಾತೆ ಪದ್ಮಾವತಿ ದೇವಿ ಜಿನ ಚೈತ್ಯಾಲಯದಲ್ಲಿ ಸುಮಾರು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತ್ಯಾಗಿ ನಿವಾಸ, ಸಭಾ ಭವನ, ಭೋಜನ ಶಾಲೆ ಮತ್ತು ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಮೂಡುಬಿದಿರೆ ಜೈನ ಮಠದ ‘ ಭಾರತ ಭೂಷಣ’ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದರು.ವಾಸ್ತು ತಜ್ಞ ಸುದರ್ಶನ ಇಂದ್ರ ಮತ್ತು ಪುರೋಹಿತರ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನಗಳು ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಸಹಕಾರ ರತ್ನ, ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್ .ರಾಜೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ,ನಾವೆಲ್ಲರೂ ನಮ್ಮ ದೈನಂದಿನ ಸಂಪಾದನೆಯಲ್ಲಿ ಒಂದು ಪಾಲು ದಾನಕ್ಕಾಗಿ ಮೀಸಲಿಟ್ಟು, ಅದನ್ನು ಇಂತಹ ಉತ್ತಮ ಕಾರ್ಯಗಳಿಗೆ ದಾನನೀಡಿದಾಗ ಆ ಪುಣ್ಯ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಶ್ರೀ ಬ್ರಹ್ಮದೇವಯ್ಯರವರು ವಹಿಸಿದ್ದರು.ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ದಾನ ನೀಡಿದ ಸಮಾಜದ ಮಹನೀಯರನ್ನು ಗೌರವಿಸಲಾಯಿತು.
ಅತಿಥಿಯಾಗಿದ್ದ ರತ್ನಾಕರ್ ಜೈನ್, ಮಂಗಳೂರು ಮಾತನಾಡಿ ಪಾಣೆಮಂಗಳೂರು ಬಸದಿಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಮಂಗಳೂರಿನ ವಕೀಲರಾದ ಜಿನೇಂದ್ರ ಕುಮಾರ್ ಮಾತನಾಡಿದರು.ಹರ್ಷರಾಜ್ ಬಳ್ಳಾಲ್ ಸ್ವಾಗತಿಸಿದರು, ದೀಪಕ್ ಕುಮಾರ್ ಇಂದ್ರ ಪ್ರಸ್ತಾವನೆಗೈದರು.ಸುಭಾಸ್ ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
