ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಜವಾಹರ್ ಲಾಲ್ ಮಂಚ್ ವತಿಯಿಂದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಪುಣ್ಯಸ್ಮರಣೆಯನ್ನು ಬಂಟ್ವಾಳ ತಾಲೂಕಿನ ಬಾಳ್ತಿಲಗ್ರಾಮದ ಶ್ರೀಶೈಲದಲ್ಲಿ ಆಚರಿಸಲಾಯಿತು.

ಮಕ್ಕಳಾದ ಶ್ರೇಷ್ಠ ,ಮೋಕ್ಷಿತಾ, ಇಂಚರ, ಇಶಾನಿ, ಶ್ರವಣ್, ಶ್ರೇಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಜವಾಹರ್ ಬಾಲ್ ಮಂಚ್ ನ ಜಿಲ್ಲಾಧ್ಯಕ್ಷ ನ್ಯಾಯವಾದಿ ಶೈಲಜಾ ರಾಜೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ,
ಮಕ್ಕಳು ದೇವರ ಸಮಾನರು ಜವಾಹರ್ ನೆಹರುರವರಿಗೂ ಮಕ್ಕಳೆಂದರೆ ಪ್ರೀತಿ, ನೆಹರುರವರ ಪುಣ್ಯಸ್ಮರಣೆಯನ್ನು ಆಚರಿಸಲಾಗುತ್ತಿದೆ.
ಮಕ್ಕಳು ಸಂಸ್ಕಾರವಂತ ಪ್ರಜೆಗಳಾಗಿ ಹೆತ್ತವರು, ಗುರು,ಹಿರಿಯರಿಗೆ ಗೌರವ ಕೊಟ್ಟು ಮನೆ ಮತ್ತು ದೇಶದ ಆಸ್ತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಅದೇರೀತಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಆತೀ ಹೆಚ್ಚು ಅಂಕ ಪಡೆದ ಶ್ರೇಯ, ಶ್ರವಣ್ ಹಾಗೂ ಶೌರ್ಯ ಮಕ್ಕಳಾದ ಆರಾಧ್ಯ,ದಯನೀತಾ ಇವರನ್ನು ಅಭಿನಂದಿಸಲಾಯಿತು.ತಿತಿಲಿ ಯೂನಿಟ್ ರಚಿಸಲಾಯಿತು
ಕಾರ್ಯಕ್ರಮದಲ್ಲಿ ಡಾ. ರಾಜೇಶ್ ಪೂಜಾರಿ, ಚಂದ್ರಾವತಿ, ಅನ್ನಪೂರ್ಣ, ಸುಲೋಚನಾ, ಶಾರದಾ, ಜಯಂತಿ, ವಿನಯ ಉಪಸ್ಥಿತರಿದ್ದರು.ಪುಣ್ಯ ಸ್ಮರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.
