ಬಂಟ್ವಾಳ: ವಾರದಿಂದೀಚೆಗೆ ಸುರಿಯುವ ನಿರಂತರ ಮಳೆಗೆ ಬಂಟ್ವಾಳತಾಲೂಕಿನ ಪುದುಗ್ರಾಮದ
ರಾಧಾಸುರಭಿ ಗೋಮಂದಿರದ ಪಕ್ಕದ ಗುಡ್ಡ ಕುಸಿದು ಗೋಶಾಲೆಗೆ ಹಾನಿ ಉಂಟಾಗಿದೆ.

ಗೋಶಾಲೆಯ ಮುಖ್ಯಸ್ಥರಾದ ಶ್ರಿ ಭಕ್ತಿ ಭೂಷಣ್ ದಾಸ್ ಜಿ ಅವರು ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ನಂದಿ ರಥಯಾತ್ರೆಯನ್ನು ಆಯೋಜಿಸಿ ನಂದಿ ಸಂಪತ್ತಿನ ವೃದ್ಧಿಯ ಅವಶ್ಯಕತೆ ಕುರಿತು  ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿ ಯಶಸ್ವಿಯಾಗಿದ್ದರು.
ಗೋಶಾಲೆಯನ್ನು ನಿರ್ಮಿಸಿ ಗವ್ಯ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿ ನೀಡುವ ಕೆಲಸವನ್ನೂ ಕೂಡ ಮಾಡುತ್ತಿದ್ದು,ಜಡಿಮಳೆಗೆ  ಗುಡ್ಡ ಕುಸಿತದಿಂದಾಗಿ ಗೋಶಾಲೆಗೆ ಸಂಪೂರ್ಣ  ಹಾನಿಯಾಗಿದೆ. ಗೋಶಾಲೆಯ ಗೋವುಗಳನ್ನು ಸದ್ಯಕ್ಕೆ ಸುರಕ್ಷಿತ ಸ್ಥಳದಲ್ಲಿರಿಸಲಾಗಿದೆ.
ಗೋಶಾಲೆಯ ಮರುನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸುವಂತೆ ಅವರು ಕೋರಿದ್ದಾರೆ.

By Suddi9

Leave a Reply

Your email address will not be published. Required fields are marked *