ಬಂಟ್ವಾಳ :ತಾಲೂಕಿನ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೇವಸ್ಥಾನದ ವಠಾರದಲ್ಲಿ ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ  ಸೇವಾರೂಪವಾಗಿ ಶ್ರೀ ಕಟೀಲು ಶ್ರೀದುರ್ಗಾಪರಮೇಶ್ವರೀ ಮೇಳದ  ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಇರ್ವರು ಹಿರಿಯ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು.

ಹಿರಿಯ ಯಕ್ಷಗಾನ ಕಲಾವಿದರಾದ ವಿಷ್ಣುಶರ್ಮ ವಾಟೆಪಡ್ಪು ಹಾಗೂ ಚಂದ್ರಹಾಸ ತುಂಬೆ ಇವರನ್ನು  ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ
ಪಾರಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರರಾದ ರತ್ನಾಕರ ಶೆಟ್ಟಿ ಮೂಡಯೂರು, ಬಾಳ್ತಿಲ ಗ್ರಾ ಪಂ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಮಂಗಳೂರಿನ ಹಿರಿಯ ವಕೀಲ,ಬಿಜೆಪಿ ಮುಖಂಡ ಜಗದೀಶ ಶೇಣವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚೆಂಡೆ ಶ್ರೀ ಕಲ್ಲುರ್ಟಿ ದೇವಸ್ಥಾನದ ಆಡಳಿತ ದಾರ, ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿದರು.
ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ ಪ್ರತಿಭಾ ಶ್ರೀಧರ ಶೆಟ್ಟಿ ವಂದಿಸಿದರು.
ಯಕ್ಷಗಾನ ಸಂಘಟಕ ಬಿ ಜನಾರ್ದನ ಅಮುಂಜೆ  ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *