ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಇಲಾಖೆ  ಬಂಟ್ವಾಳ ಮತ್ತು ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ  ಇವರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಮಹಾಸಭೆಯು ಬಿ.ಸಿ.ರೋಡಿನಲ್ಲಿರುವ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹೆಚ್. ಐ.ಅವರು ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ,ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಹಿಳೆಯರು ಆತ್ಮ ನಿರ್ಭರವಾಗಿ ತಮ್ಮ ಜೀವನ ನಿರ್ವಹಣೆಯನ್ನು ಸುಗಮಗೊಳಿಸಬಹುದು ಎಂದರು.


ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಸೊಸೈಟಿ ಅಧ್ಯಕ್ಷರಾದ  ಶೋಭಾ ರವರು ವಹಿಸಿ ಮಾತನಾಡಿ, ಮಹಿಳೆಯರು ಸಮಾಜದ ಹೆಮ್ಮೆಯ ಶಕ್ತಿಯಾಗಿದ್ದು, ಸ್ವಾವಲಂಬಿ ಜೀವನವು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ ಸಮಾಜದ ಮತ್ತು ಸಾಮಾಜಿಕ ಬದುಕಿಗೆ ನಾಂದಿಯಾಗುತ್ತದೆ ಎಂದರು.
ಬಳಿಕ ಮುಂದಿನ ಸಾಲಿಗೆ ತಾಲೂಕು ಬ್ಲಾಕ್ ಸೊಸೈಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆಪ್ರಕ್ರಿಯೆ ನಡೆಸಲಾಯಿತು.
ನೂತನ  ಅಧ್ಯಕ್ಷರಾಗಿ  ಜಯಂತಿ ಶಂಭೂರು ರವರು ಆಯ್ಕೆಗೊಂಡರು.
ಬ್ಲಾಕ್ ಸೊಸೈಟಿಯ ಸದಸ್ಯತ್ವ ಪಡೆದುಕೊಂಡವರಲ್ಲಿ ಯಾರಾದರೂ ನಿಧನರಾಗಿದ್ದಲ್ಲಿ ಅವರಿಗೆ ಮರಣ ಪರಿಹಾರವನ್ನು ನೀಡುವುದಾಗಿ ನಿರ್ಣಯಿಸಲಾಯಿತು.
ಶಾಲಿನಿ ಅವರು ವರದಿ ವಾಚಿಸಿದರು.ಕೋಶಾಧಿಕಾರಿ ಕಸ್ತೂರಿ  ಸ್ವಾಗತಿಸಿ,
ಕಮಲಾಕ್ಷಿ ರಾವ್ ವಂದಿಸಿದರು ಮೇಲ್ವಿಚಾರಕಿ ಶೋಭಾ ರವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *