ಬಂಟ್ವಾಳ : ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ  ಭಾರತೀಯ ಯೋಧರಿಗೆ ಒಳಿತಾಗಲಿ, ಸೇನೆಗೆ ಮತ್ತಷ್ಟು ಶಕ್ತಿ ಭಗವಂತ ಅನುಗ್ರಹಿಸಿ ಕರುಣಿಸಲಿ ಎಂದೂ ಸಂಕಲ್ಪಿಸಿ ಬಂಟ್ವಾಳ ತಾಲೂಕಿನ  ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ನಂದಾವರ ಹಾಗೂ ಪಣೋಲಿಬೈಲು ಶ್ರೀ ಕಲ್ಲುರ್ಟಿ- ಕಲ್ಕುಡ ದೈವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಈ ಸಂದರ್ಭ ನಂದಾವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ಕೆ. ಪ್ರಭಾಕರ ಶಟ್ಟಿ. ಸದಸ್ಯರಾದ ಮೋಹನದಾಸ ಪೂಜಾರಿ, ಅಣ್ಣು ನಾಯ್ಕ್ ನಗ್ರಿ,  ನವೀನ್ ಕುಮಾರ್, ಸುಧೀರ್ ಕುಮಾರ್ ಉಪಸ್ಥಿತರಿದ್ದರು. 

ಪಣೋಲಿಬೈಲು ಕ್ಷೇತ್ರದಲ್ಲಿ ಸ್ಥಳೀಯ ಪ್ರಮುಖರು ಹಾಜರಿದ್ದರು.

ರಾಜ್ಯ ಮುಜರಾಯಿ ಸಚಿವರ ನಿರ್ದೇಶನ ದಂತೆ ರ್ಧಾರ್ಮಿಕ ದತ್ತಿ ಆಯುಕ್ತರು ನೀಡಿದ  ಸುತ್ತೋಲೆಯನ್ವಯ  ಭಯೋತ್ಪಾದಕರ ಶಿಬಿರಗಳ ಮೇಲೆ “ಅಪರೇಷನ್ ಸಿಂಧೂರ” ಹೆಸರಿನಲ್ಲಿ ಉಶಸ್ವಿಯಾದ ಸೇನಾ ಕಾರ್ಯಾಚರಣೆ ಮತ್ತು ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಅನುಗ್ರಹಿಸಲಿ ಎಂದು ವಿಶೇಷ ಪೂಜೆ ಪ್ರಾರ್ಥನೆ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *