ಬಂಟ್ವಾಳ : ಕರಿಯಂಗಳ ಗ್ರಾಮ ಪಂಚಾಯತ್ ಪೊಳಲಿ ಕಲ್ಕುಟ ಕೊಳದ ಸರೋವರ ಕೆರೆಯನ್ನು ಶ್ರೀ.ಕೇ.ಧ.ಗ್ರಾ.ಯೋ.ಬಂಟ್ವಾಳ ಬಿ.ಸಿ. ಟ್ರಸ್ಟ್ ಮೂಲಕ ನಮ್ಮೂರು-ನಮ್ಮಕೆರೆ ಕಾರ್ಯಕ್ರಮದಡಿಯಲ್ಲಿ ಸುಮಾರು ೧೦ ಲ.ರೂ.ವೆಚ್ಚದಲ್ಲಿ ಹೂಳೆತ್ತಿಪುನಶ್ಚೇತನಗೊಳಿಸಿ ಬಾಗಿನ ಅರ್ಪಣೆ ಸಂದರ್ಭ ಎಂಅರ್‌ಪಿಎಲ್ ಸಂಸ್ಥೆಯ ಸಿ.ಎಸ್ ಆರ್ ಅನುದಾನದಿಂದ ಸುಮಾರು ೬.೭೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಶೌಚಾಲಯವನ್ನು ಎಂಅರ್‌ಪಿಎಲ್ ಸಂಸ್ಥೆಯ ಪ್ರಬಂಧಕರಾದ ಪ್ರದೀಪ್ ಕುಮಾರ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ.ಟಿ.ಸಾಲ್ಯಾನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಅಭಿಯಂತರ ಸುಶಾನ್ ,ಪಿಡಿಒ ವಸಂತಿ, ನಿವೃತ್ತ ಪಿಡಿಒ ಮಾಲಿನಿ
ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್,ಕರಿಯಂಗಳ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ,ಕರಿಯಂಗಳ ಗ್ರಾ.ಪಂ.ಉಪಾಧ್ಯಕ್ಷ ರಾಜುಕೋಟ್ಯಾನ್, ಪೊಳಲಿ ಜಯರಾಮಕೃಷ್ಣ, ಗುತ್ತಿಗೆದಾರ ಅಬುಬಕ್ಕರ್, ಯಶೋಧರ ಹಾಗೂ ಪಂಚಾಯತ್ ಸದಸ್ಯರು, ದ್ಧಿ.ದ.ಲೆಕ್ಕ ಸಹಾಯಕರು ಹಾಗೂ ಸಿಬ್ಬಂದಿವರ್ಗದವರು ಇದ್ದರು.

By suddi9

Leave a Reply

Your email address will not be published. Required fields are marked *