ಬಂಟ್ವಾಳ : ಬಜಪೆಯಲ್ಲಿ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಚಿಕ್ಕಮಂಗಳೂರು ಜಿಲ್ಲಾ ಬಿಜೆಪಿಯ ನಾಯಕರ ನಿಯೋಗ ಗುರುವಾರ ಭೇಟಿ ನೀಡಿ ಅವರ ಹೆತ್ತವರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಇದೇ ವೇಳೆ ಸುಹಾಸ್ ಶೆಟ್ಟಿ ಹೆತ್ತವರಿಗೆ ಮೂರು ಲಕ್ಷ ಆರ್ಥಿಕ ನೆರವು ನೀಡಿದರಲ್ಲದೆ  ಮುಂದೆಯೂ  ನಾವು ನಿಮ್ಮ ಜೊತೆಗಿರುವುದಾಗಿ ಭರವಸೆ ನೀಡಿದರು.
ಚಿಕ್ಕಮಂಗಳೂರು ಜಿಲ್ಲಾ ಬಿಜೆಪಿ
ಅಧ್ಯಕ್ಷರಾದ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರದಪ್ಪ, ಬಿಜೆಪಿ ಜಿಲ್ಲಾ ವಕ್ತಾರ ಸಿ. ಎಚ್. ಲೋಕೇಶ್, ರಾಜ್ಯ ಒ. ಬಿ. ಸಿ ಕಾರ್ಯದರ್ಶಿ ರಾಜಪ್ಪ, ವಿ. ಎಚ್. ಪಿ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ಪೈ, ಬಿಜೆಪಿ ಜಿಲ್ಲಾ ವಕ್ತಾರ ಸೋಮಶೇಖರ್,ಕನಕ ರಾಜ್ ಅರಸ್ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶರತ್,ನಗರ ಸಭೆ ಮಾಜಿ ಉಪಾಧ್ಯಕ್ಷ ಕಾಯಿ ರವಿ, ನಗರ ಪ್ರಧಾನ ಕಾರ್ಯದರ್ಶಿ ಕೌಶಿಕ್, ಬಿಜೆಪಿ ಪ್ರಕೋಷ್ಠ ದ ಕಾರ್ತಿಕ್ ಮತ್ತು ಚಮಿನ್ ಗೌಡ ಭೇಟಿ ನೀಡಿದರು.
ಈ ಸಂದರ್ಭ ಕಾವಳ ಮುಡೂರು ಗ್ರಾ. ಪಂ. ಅಧ್ಯಕ್ಸರಾದ ಅಜಿತ್ ಶೆಟ್ಟಿ,ಬಿಜೆಪಿ ಬಂಟ್ವಾಳ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *