ಬಂಟ್ವಾಳ:  ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳು ಮತ್ತು  ದೌರ್ಜನ್ಯ ತಡೆ ಘಟಕದ ವತಿಯಿಂದ ಮಾನವ ಹಕ್ಕುಗಳ ಅರಿವು ಮತ್ತು ಮಹಿಳಾ ದೌರ್ಜನ್ಯ ತಡೆ ಕಾರ್ಯಾಗಾರ ನಡೆಯಿತು. 

 ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಿ.ಸಿ.ರೋಡಿನ ನ್ಯಾಯವಾದಿ  ವೀರೇಂದ್ರ ಎಂ.ಸಿದ್ದಕಟ್ಟೆ  ಕಾರ್ಯಾಗಾರವನ್ನು ಉದ್ಘಾಟಿಸಿ, ಪ್ರಸ್ತುತ ಮಾನವ ಹಕ್ಕುಗಳ ಸವಾಲುಗಳು ಮತ್ತು ಮಹಿಳಾ ಹಕ್ಕುಗಳ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.

 ಕಾಲೇಜಿನ ಉಪಪ್ರಾಂಶುಪಾಲರಾದ  ಸುಕನ್ಯಾ, ಘಟಕದ ನಿರ್ದೇಶಕರಾದ  ಅಕ್ಷತಾ ಮತ್ತು ಆಶಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ಕು. ಶುಭಲಕ್ಷ್ಮಿ ಸ್ವಾಗತಿಸಿ, ಕು. ರಕ್ಷಾ ವಂದಿಸಿದಳು, ಕು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *