ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ರಚನೆಯಾಗಿದ್ದು, ಈ ಶೈಕ್ಷಣಿಕ ವರ್ಷದಿಂದ 2025-26 ಆರಂಭಗೊಂಡು 2027-28ರವರೆಗೆಕಾರ್ಯಪ್ರವೃತ್ತವಾಗಲಿದೆ. ನೂತನ ಅಧ್ಯಕ್ಷರಾಗಿ ಕಿಶೋರ್ ಕುಲಾಲ್ ಅವರು ಸರ್ವಾನುಮತದಿಂದ ಆಯ್ಕೆಗೊಂಡರು.

ಅಧ್ಯಕ್ಷ ಹರೀಶ್ ಮಾಂಬಾಡಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಶಿಕ್ಷಕಿ ಲಕ್ಷ್ಮೀ ಅವರು ಪ್ರಕ್ರಿಯೆ ನಡೆಸಿಕೊಟ್ಟರು. ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್, ಪುರಸಭೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಉಮಾವತಿ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

ನೂತನ ಸಮಿತಿಯ ವಿವರ ಹೀಗಿದೆ. ಕಿಶೋರ್ ಕುಲಾಲ್ (ಅಧ್ಯಕ್ಷರು), ವಿನೋದಾ (ಉಪಾಧ್ಯಕ್ಷರು),  ಸದಸ್ಯರಾಗಿ  ಹರೀಶ್ ಮಾಂಬಾಡಿ, ದೇವದಾಸ್ ಅಗ್ರಬೈಲ್, ಕಾವ್ಯಶ್ರೀ, ಸುನೀತಾ, ರಾಜೇಂದ್ರ, ಶಿವಮೂರ್ತಿ ಆರ್, ಕವಿತಾ, ಜಯಂತಿ, ವೇದಾವತಿ, ಜಯಲಕ್ಷ್ಮೀ, ನಿಶ್ಮಿತಾ, ಶಮೀಮಾ, ಆನಿತಾ, ಪವಿತ್ರಾ, ಸುನೀತಾ, ಸಾವಿತ್ರಿ ಸದಸ್ಯರಾಗಿ ಆಯ್ಕೆಗೊಂಡರು.

By suddi9

Leave a Reply

Your email address will not be published. Required fields are marked *