ಬಂಟ್ವಾಳ :  ತಾಲೂಕಿನ ನರಿಕೊಂಬು ಗ್ರಾಮದ ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.) ಮತ್ತು ಮಹಿಳಾ ಘಟಕ ಇದರ ಕುಲಾಲ ಸಮುದಾಯ ಭವನಕ್ಕೆ ಶ್ರೀಧಾಮ ಮಾಣಿಲದ  ಶ್ರೀ ಮೋಹನದಾಸ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದರು.


ಬಳಿಕ ಪಾಣೆಮಂಗಳೂರು ಸತ್ಯ ಶ್ರೀ ಕಲ್ಯಾಣ ಮಂಟಪದಲ್ಲಿನರಿಕೊಂಬು ಕುಂಬಾರ ಯಾನೆ ಕುಲಾಲರ ಸಂಘದ ಅಧ್ಯಕ್ಷರಾದ ಎಂ.ಪಿ.ಸುಂದರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಉದ್ಘಾಟಿಸಿ ಶುಭಹಾರೈಸಿದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,  ಮಾಜಿ ಸಚಿವ ರಮನಾಥ ರೈ, ದ.ಕ.ಜಿ.ಪಂ. ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ, ನರಿಕೊಂಬು ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಶಕ್ತಿನಗರ  ಶ್ರೀ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ ಕುಲಾಲ್,ಶ್ರೀ ವೀರನಾರಯಣ ದೇವಸ್ಥಾನ ಕುಲಶೇಖರದ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಲೂರು, ಪತ್ರಕರ್ತ ದಿನೇಶ್ ಕುಲಾಲ್, ಬಂಟ್ವಾಳ ಸಮಾಜ ಸೇವ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಉಪಾಧ್ಯಕ್ಷ ಜನಾರ್ದನ ಬೊಂಡಾಲ,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್,ಮೂರ್ತೆದಾರರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪುರುಷೋತ್ತಮ ಸಾಲಿಯನ್,ಮೂಡಿಗೆರೆ ಕುಲಾಲ್ ಸಂಘದ ಅಧ್ಯಕ್ಷ ಹರೀಶ್ ಮೂಡಿಗೆರೆ,  ಉದ್ಯಮಿ ಯು.ರಾಮ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.


ನಂತರ  ಗುರುಗಳಾದ ವಿದುಷಿ ನಾಯನ ಸತ್ಯನಾರಾಯಣ ಹಾಗೂ ವಿದುಷಿ ಅಶ್ವಿನಿ ಹೊಳ್ಳ ರವರ ಶಿಷ್ಯರಿಂದ ಭರತನಾಟ್ಯ, ವಿಠಲ ನಾಯಕ್ ರವರಿಂದ ಗೀತಾ -ಸಾಹಿತ್ಯ, ಸಂಭ್ರಮ  ಜರಗಿತು.
ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಎಂ.ಕೆ ಸ್ವಾಗತಿಸಿ, ಪ್ರಚಾರ ಸಮಿತಿಯ ವಸಂತ್ ಕುಲಾಲ್ ಭೀಮಗತ್ತೆ ಪ್ರಸ್ತಾವನೆಗೈದರು, ಕೋಶಾಧಿಕಾರಿ  ಕರುಣಾಕರ ಕುಲಾಲ್ ನಾಯಿಲ ವಂದಿಸಿದರು. ಎಚ್ ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *