ಬಂಟ್ವಾಳ: ರಕ್ತದಾನ ಶ್ರೇಷ್ಠವಾದ ದಾನ. ತುರ್ತು ಸಂದರ್ಭದಲ್ಲಿ ರಕ್ತದಾನದಿಂದ ಜೀವ ದಾನವನ್ನು ಮಾಡಬಹುದಾಗಿದೆ. ಇದರಿಂದ ವೈಯಕ್ತಿಕವಾಗಿಯೂ ಲಾಭವಿದ್ದು ಕೊಲೆಸ್ಟರಾಲ್ ಕಡಿಮೆಯಾಗಿ ಆರೋಗ್ಯ ವೃದ್ದಿಯಾಗುತ್ತದೆ, ಸ್ವಯಂ ರಕ್ತದಾನ ಮಾಡುವುದರ ಜೊತೆಗೆ ಮತ್ತೊಬ್ಬರನ್ನು ಪ್ರೇರೆಪಿಸಬೇಕು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ್ ಟಿ. ಹೇಳಿದರು.


ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ನೇತೃತ್ವದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆದ 131ನೇ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಕ್ತದಾನ ಶಿಬಿರ ಆರಂಭಿಸುವುದು ದೊಡ್ಡ ವಿಚಾರವಲ್ಲ,  ಅದನ್ನು 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುವುದು ಶ್ರೇಷ್ಟವಾದ ಕೆಲಸ ಎಂದು ತಿಳಿಸಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಪಕ ಜಯರಾಂ ತುಂಬೆ , ಕೆಎಂಸಿ ಬ್ಲಡ್ ಬ್ಯಾಂಕಿನ ದೇವ ಸ್ಮಿತಾ ಉಪಸ್ಥಿತರಿದ್ದರು.
ಸೇವಾಂಜಲಿ ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಮುಖರಾದ ಚಂದ್ರಹಾಸ ಕಡೆಗೋಳಿ, ಜಗದೀಶ ಕಡೆಗೋಳಿ, ಅರ್ಕುಳ ಪಂಚಾಯತಿ ಸದಸ್ಯ ಪ್ರವೀಣ್ ಅರ್ಕುಳ, ಶೇಖರ್ ಪೂಜಾರಿ ಕಲ್ಲತಡಮೆ, ಪದ್ಮನಾಭ ಕಿದೆಬೆಟ್ಟು, ಮೋಹನ್ ಬೆಂಜನಪದವು, ಪ್ರಶಾಂತ್ ತುಂಬೆ, ದಿವಾಕರ ನರಿಕೊಂಬು, ಶಿವರಾಜ್ ಸುಜೀರ್ ಸುಕೇಶ್ ಚೌಟ ತೇವು, ಯೋಗೀಶ್ ಸುಜೀರ್, ಉಮೇಶ್ ಮೇರಮಜಲು ಸಹಕರಿಸಿದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಶಿಬಿರದಲ್ಲಿ ಒಟ್ಟು 52 ಯುನಿಟ್ ರಕ್ತ ಸಂಗ್ರಹವಾಯಿತು.

By suddi9

Leave a Reply

Your email address will not be published. Required fields are marked *