ಬೆಳ್ಳೂರು ಬಂಟರ ಸಂಘದ ಅಧ್ಯಕ್ಷರಾಗಿ ರಾಧಾಕೃಷ್ಣ ರೈ ಪೊಳಲಿ ಅಯ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಬೆಳ್ಳೂರು ವಲಯ ಬಂಟರ ಸಂಘದ ೨೦೨೫-೨೮ ಸಾಲಿನ ನೂತನ ಅಧ್ಯಕ್ಷರಾಗಿ ಪೊಳಲಿ ರಾಧಾಕೃಷ್ಣ ರೈಮುಗುಳ್ಯ ಅಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಜನಾರ್ಧನ ಶೆಟ್ಟಿ ದಾಖಲೆಪತ್ರಗಳನ್ನು ಹಸ್ತಾಂತರಿಸಿದರು.

೨೦೨೫-೨೮ ನೇಶಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಗೌರವ ಅಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು ಕುರಿಯಾಳ, ಬೆಳ್ಳೂರು ವಲಯ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ರೈ ಪೊಳಲಿ , ಉಪಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ಕಾಂಬೋಡಿ ಕುರಿಯಾಳ, ಉಪಾಧ್ಯಕ್ಷೆ ನಳಿನಿ ಶೆಟ್ಟಿ ಕೂರಿಯಳ , ಕಾರ್ಯದರ್ಶಿ ಸೂರ್ಯಕಾಂತ್ ಶೆಟ್ಟಿ ಬೆಳ್ಳೂರು ಕಟ್ಟೆಮಾರ್ , ಜೊತೆ ಕಾರ್ಯದರ್ಶಿ ಸಂಜೀವ ಅಜಿಲ ಬೆಳ್ಳೂರು ಭಂಡಾರಮನೆ , ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಬಲ್ಲಾಳ್ ಅಮ್ಮುಂಜೆ , ಸಂಘಟನಾ ಕಾರ್ಯದರ್ಶಿ ಶಾಂತಿ ಶೆಟ್ಟಿ ಪಲ್ಲಿಪಾಡಿ ಆಯ್ಕೆಯಾಗಿದ್ದಾರೆ. ಶ್ರೀಮತಿ ಶಾಲಿನಿ ಜನಾರ್ಧನ ಶೆಟ್ಟಿ ಪ್ರಾರ್ಥಿಸಿದರು. ನಿಕಟಪೂರ್ವ ಕಾರ್ಯದರ್ಶಿ ನರೇಶ್ ಶೆಟ್ಟಿ ಸ್ವಾಗತಿಸಿ. ಕಮ್ಮಾಜೆ ಪುಷ್ಪರಾಜ್ ಶೆಟ್ಟಿ ನಿರೂಪಿಸಿದರು. ಕಿಶೋರು ಭಂಡಾರಿ ಸಮಗ್ರ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಳೆದ ೧೩ ವರ್ಷಗಳಿಂದ ಬೆಳ್ಳೂರು ವಲಯದ ಬಂಟರ ಸಂಘದ ಸ್ಥಾಪಕ ಗೌರವಧ್ಯಕ್ಷರಾಗಿ ಅಗಲಿದ ದಿ.ರಘುನಾಥ ಪಯ್ಯಡೆ ಕೂರಿಯಾಳ ಗುತ್ತು ಇವರಿಗೆ ಶ್ರಧ್ಧಾಂಜಲಿ ಅರ್ಪಿಸಲಾಯತು.