ಶೇರಾ ಶಾಲೆಯಲ್ಲಿ ಮಕ್ಕಳಿಂದ ಭರ್ಜರಿ ವ್ಯಾಪಾರ
ಬಂಟ್ವಾಳ : ತಾಲೂಕಿನ ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ,ವ್ಯವಹಾರ ನಡೆಸಿ ಗಮನಸೆಳೆದರು.ಮಕ್ಕಳು ಮನೆಯಲ್ಲಿ ಬೆಳೆಸಿದ ತರಕಾರಿ ತಂದು ವ್ಯಾಪಾರಕ್ಕೆ ಇಟ್ಟಿದ್ದಲ್ಲದೆ ಬೆಂಕಿ ಇಲ್ಲದೆ ತಯಾರಿಸುವ ಆಹಾರ ಗಳಾದ ಜ್ಯೂಸ್, ಚರಂಬೂರಿ, ಪಾನಿಪುರಿ, ಐಸ್ ಕ್ರೀಮ್, ಮಾವಿನ ಕಾಯಿ ಮಸಾಲೆ,ಕಲ್ಲಂಗಡಿ,ಫ್ಯಾನ್ಸಿ ಸಾಮಾಗ್ರಿ ಮೊದಲಾದ ವ್ಯಾಪಾರ ಮಾಡಿ ತಮ್ಮ ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡರು.

ಸಂತೆ,ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ತರಕಾರಿ ಖರೀದಿಸಬೇಕಾಗಿದ್ದು,ಮಕ್ಕಳು ತಂದಿರಿಸಿದ್ದ ತರಕಾರಿ ಕಡಿಮೆ ಬೆಲೆಯಲ್ಲೇ ಮಾರಾಟ ಮಾಡಿದರಿಂದ ತರಕಾರಿ ಸಹಿತ ಇತರೆ ವಸ್ತುಗಳು ಕಾರ್ಯಕ್ರಮ ಉದ್ಘಾಟನೆಗೊಂಡ ಕೆಲವೇ ಹೊತ್ತಿನಲ್ಲಿ ಖಾಲಿಯಾಗಿತ್ತು.
ಜಾತ್ರೆಯಲ್ಲಿ ಇರುವಂತ ಮಕ್ಕಳ ಆಟಗಳಾದ ರಿಂಗ್ ಎಸೆತ, ಗ್ಲಾಸ್ ಗೆ ಚೆಂಡು ಎಸೆತ, ಲಕ್ಕಿ ಗೇಮ್ ಮೊದಲಾದ ಆಟಗಳು ಸೇರಿದವರನ್ನು ರಂಜಿಸಿತು.

ಮೇಳವನ್ನು ಉದ್ಘಾಟಿಸಿದ ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬನಾರಿ ಅವರು ಮಾತನಾಡಿ,
ಮಕ್ಕಳಿಗೆ ಸ್ವ- ವ್ಯಾಪಾರ,ಉದ್ಯೋಗದ ಅನುಭವ ಬಾಲ್ಯದಲ್ಲಿಯೇ ತಿಳಿ ಹೇಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಂದ್ರಶೇಖರ್ ಸಭಾಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ರುಗಳಾದ, ಚೆನ್ನಪ್ಪ ಎಸ್ ಅಂಚನ್, ಕೇಶವ ಕೆ,ಐಡಿಯಲ್ ಕ್ಯಾಷ್ಯು ಇಂಡಸ್ಟ್ರೀಸ್ ಮಾಲಕ ಗಂಗಾಧರ,ನಿವೃತ್ತ ಮುಖ್ಯ ಶಿಕ್ಷಕಿ ಕೋಮಲಾಂಗಿ ಜಿ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಾನಂದ,ಉದಯ ಯುವಕ ಮಂಡಲದ ಅಧ್ಯಕ್ಷ ರವಿ, ನೀರಕಜೆ ಅಂಗನವಾಡಿ ಶಿಕ್ಷಕಿ ಪುಷ್ಪ, ಪ್ರಗತಿ ಬಸ್ ಮಾಲಕ.ಸಂಶುದ್ದೀನ್,
ಎಸ್ ಡಿ ಎಂ ಸಿ.ಸದಸ್ಯರು ಮತ್ತು ಪೋಷಕರು , ಹಳೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕಿ ಜೋಸ್ನಾ ಪ್ರಿಯ ವಾಸ್ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪಿ ಪ್ರಸ್ತಾವನೆಗೈದರು,ಹಿರಿಯ ಶಿಕ್ಷಕ ಗೋಪಾಲ ಗೌಡ ವಂದಿಸಿದರು. ಶಿಕ್ಷಕಿ ಅನಿತಾ ಕುಮಾರಿ,ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಸುಮಲತಾ ಸಹಕರಿಸಿದರು.