ಬೆಳ್ಳೂರು ಮಾಡ್ಲಾಯ ದೈವಸ್ಥಾನದ ಶಿಲಾಮಯ ಮೆಟ್ಟಿಲುಗಳ ಉದ್ಘಾಟನೆ
ಕೈಕಂಬ: ಬೆಳ್ಳೂರು ಕೊಳತ್ತಮಜಲು ಮಾಡ್ಲಾಯ ದೈವಸ್ಥಾನದ ಶಿಲಾಮಯ ಮೆಟ್ಟಿಲುಗಳ ಉದ್ಘಾಟನೆಯನ್ನು ಎ.೧೩ರಂದು ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೆರವೇರಿಸಿದರು.ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನಿರ್ಧೇಶಕ ಗಂಗಾಧರ ಪೂಜಾರಿ,ದೇವಪ್ಪ ಪೂಜಾರಿ,ವೀಣಾ ಎಲ್ ಭಟ್, ಸವಿತಾ ಎನ್ ಶೆಟ್ಟಿ, ಸೀತಾರಾಮ ಪೂಂಜ ಮತ್ತಿತರರು ಇದ್ದರು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ರಮಾನಾಥ ರೈ ನಿಷ್ಕಲ್ಮಶ ಮನಸ್ಸಿನ ಭಕ್ತಿಗೆ ದೇವರು ಖಂಡಿತ ನಮಗೆ ಒಲಿಯುತ್ತಾನೆ ದೈವದೇವರ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡುವಾಗ ಮನಸ್ಸನ್ನು ಏಕಾಗ್ರತೆಯಿಂದ ಭಗವಂತನನ್ನು ಸ್ತುತಿಸಿದರೆ ದೇವರು ನಮಗೆ ಒಳಿಯುತ್ತಾನೆ ಎಂದು ಮುಖ್ಯ ಅತಿಥಿಯಾಗಿ ಅಗಮಿಸಿದ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಹೇಳಿದರು. ಅಧ್ಯಕ್ಷತೆಯನ್ನು ಕಾವೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ ವಹಿಸಿದ್ದರು.

ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೂಪಶ್ರೀ ನಾಯಕ್ ಉದ್ಯಮಿಗಳಾದ ಸತೀಶ್ ರಾವ್ ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಣ್ಣಾಯ ಆಡಳಿತ ಅಧಿಕಾರಿ ನಾಗರಾಜ್ ಹಾಗೂ ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾಸಮಿತಿ ಸದಸ್ಯರು ಉಸ್ಥಿತರಿದ್ದರು. ದಿನೇಶ್ ವರಕೋಡಿ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.