Published On: Mon, Mar 24th, 2025

ಸಮಾಜದ ಪರಿವರ್ತನೆಯಲ್ಲಿ ಸಹಕಾರಿಕ್ಷೇತ್ರದ ಕೊಡುಗೆ ಅಪಾರ’ ಸಂಸದ ಬ್ರಿಜೇಶ್ ಚೌಟ 

ಬಂಟ್ವಾಳ:  ಸಮಾಜದ ಪರಿವರ್ತನೆಯಲ್ಲಿ ಸಹಕಾರಿಕ್ಷೇತ್ರದ ಕೊಡುಗೆಯು ಅಪಾರವಿದ್ದು,ಸರಕಾರದ ಕಾರ್ಯಕ್ರಮ,ಯೋಜನೆಗಳನ್ನು ಪ್ರಕೋಷ್ಠದ ಮೂಲಕ ನೈಜ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಗಳು ಪ್ರಯತ್ನಿಸಿದಾಗ ಪಕ್ಷಕ್ಕು ಶಕ್ತಿ ತುಂಬಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.


ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಹಕಾರಿ‌ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯ ಸಬ್ ಕಾಸಾಥ್,ಸಬ್ ಕಾ ವಿಕಾಸ್,ಸಬ್ ಕಾ ಪ್ರಯಾಸದಡಿ, ದ.ಕ.ಜಿಲ್ಲೆಯ ಸಹಕಾರಕ್ಷೇತ್ರ ಅಧ್ಯಯನಕ್ಕು ಯೋಗ್ಯವಾಗಿದೆ ಎಂದ ಅವರು ಕೇಂದ್ರ ಸರಕಾರ ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿ ಪ್ರಭಾವಿ ಸಚಿವರನ್ನು ನೀಡುವ ಮೂಲಕ ಸಹಕಾರಿಕ್ಷೇತ್ರಕ್ಕೆವಿಶೇಷ ಮನ್ನಣೆಯನ್ನು ನೀಡಿದೆ‌ಎಂದರು.


  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ಸಹಕಾರಿ ಸಂಘದ ಚುನಾವಣೆಯ ಕಾರ್ಯವನ್ನು ಬಿಜೆಪಿ ಮಂಡಲ,ಪ್ರಕೋಷ್ಠದ ಪದಾಧಿಕಾರಿಗಳು ಅತ್ಯಂತ ನಿಷ್ಠೆಯಿಂದ ಮತ್ತು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು


ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಪ್ರತಿ ಚುನಾವಣೆಯಲ್ಲಿಯು ಸಣ್ಣ ಪುಟ್ಟ ‌ಗೊಂದಲಗಳು ಸಹಜ.ಅವೆಲ್ಲವನ್ನೂ ಬದಿಗಿರಿಸಿ ಕಾರ್ಯಕರ್ತರು ಕೆಲಸ ಮಾಡಿದ ಫಲವಾಗಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಸ್ಥೆ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ.ಮುಂಬರುವ
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೂ ಸಹಕಾರಿ ಸಂಸ್ಥೆಯ ಚುನಾವಣಾ ಫಲಿತಾಂಶ ಭದ್ರ ಬುನಾದಿಯಾಗಿದೆ ಎಂದರು,
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಕಾರಿ ಸಮಾವೇಶ ಮಾಡಲಾಗುತ್ತದೆ. ಕೇಂದ್ರ ಸಚಿವ ಅಮಿತ್ ಶಾ ಅವರ ಸಮಯವನ್ನು ಪಡೆದುಕೊಂಡು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಸಹಕಾರಿ ಸಮಾವೇಶ ನಡೆಸಲು ಯೋಚಿಸಲಾಗಿದೆ ಎಂದರು.
ದ.ಕ.ಜಿಲ್ಲೆ ಹಿಂದುತ್ವದ  ಭದ್ರಕೋಟೆ ಎಂಬುದನ್ನು ಸಹಕಾರಿ ಸಂಸ್ಥೆಯ ಚುನಾವಣಾ ಫಲಿತಾಂಶದ ಮೂಲಕ ಮತ್ತೊಮ್ಮೆ ಸಾಭೀತು ಪಡಿಸಿದೆ.ಕಾಂಗ್ರೆಸ್ ನ ದಬ್ಬಾಳಿಕೆಯನ್ನು ಎದುರಿಸಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಅಭಿನಂದನೀಯವಾಗಿದೆ.ಮುಂಬರುವ ಜಿ.ಪಂ.,ತಾ.ಪಂ.,ಸಹಿತ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆಯ ದೃಷ್ಠಿಯಿಂದ ಕಾರ್ಯಕರ್ತರು ಸಜ್ಜಾಗಬೇಕಾಗಿದರ ಎಂದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್ .ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಮಂಡಲದ ಪ್ರಭಾರಿ
ಪ್ರೇಮಾನಂದ ಶೆಟ್ಟಿ,ಡಿಸಿಸಿ ಬ್ಯಾಂಕ್ ನಿರ್ದೇಶಕರು,ಜಿಲ್ಲಾ ಪ್ರಕೋಷ್ಠದ ಸಂಚಾಲಕರಾದ ಟಿ.ಜಿ.ರಾಜಾರಾಮಭಟ್,ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪೂಜಾಪೈ,ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿಗಳಾದ ಸುದರ್ಶನ್ ಬಜ,ಶಿವಪ್ರಸಾದ್ ,ಕಾರ್ಯದರ್ಶಿ ಜನಾರ್ದನ ಬೊಂಡಾಲ ಮೊದಲಾದವರಿದ್ದರು.
ಬಿಜೆಪಿ ಬಂಟ್ವಾಳ ಮಂಡಲ ಸಹಕಾರಿ ಪ್ರಕೋಷ್ಠದ ಅಧ್ಯಕ್ಷಜಯರಾಮರೈ ಸ್ವಾಗತಿಸಿದರು.ಪ್ರಣಾಮ್ ಅಜ್ಜಿಬೆಟ್ಟು ವಂದೇಮಾತರಂ ಹಾಡಿದರು.
20 ಕೃಷಿ ಪತ್ತಿನ ಸಹಕಾರಿ ಸಂಘದ ಪೈಕಿ
19 ಸಂಘಗಳಿಗೆ ಚುನಾವಣೆ ನಡೆದಿದ್ದು,ಇದರಲ್ಲಿ 18 ಸಂಘಗಳಲ್ಲಿ  ಬಿಜೆಪಿ ಪ್ರಕೋಷ್ಠ  ಗೆಲುವು ಸಾಧಿಸಿದೆ.
ಇದೇ ವೇಳೆಸಹಕಾರಿ ರತ್ನ ಪ್ರಶಸ್ರಿ ಪುರಸ್ಕೃತರಾದ ರವೀಂದ್ರಕಂಬಳಿ,ಹಾಗೂ ಬಿಜೆಪಿ ಬಂಟ್ವಾಳ ಮಂಡಲ ಪ್ರಕೋಷ್ಠದ ಸಂಚಾಲಕ ,ಗೆಲುವಿನ ರೂವಾರಿ ಜಯರಾಮರೈ  ಅವರನ್ನು ಸನ್ಮಾನಿಸಲಾಯಿತು.ಹಾಗೂ ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು   ಸಾಧಿಸಿದ ಸಂಘಗಳ ನಿರ್ದೇಶಕರನ್ನು ಗೌರವಿಸಲಾಯಿತು.
. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಸಹಕಾರಿ ಕರ್ತವ್ಯ ,ಜವಬ್ದಾರಿಯ ಬಗ್ಗೆ ಕ್ಯಾಂಪ್ಕೋ ಮಾಜಿ ಅಧ್ಯಕ್ಷ  ಸತೀಶ್ಚಂದ್ರ ಎಸ್.ಆರ್ ಅವರು ಮಾಹಿತಿ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter