ಅಧಿವಕ್ತಾ ಪರಿಷತ್ ನಿಂದ ವಿಶ್ವ ಮಹಿಳಾ ದಿನಾಚರಣೆ
ಬಂಟ್ವಾಳ: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ – ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಾಗಾರವು ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ನಡೆಯಿತು.
ಕಾರ್ಯಾಗಾರ ಉದ್ಘಾಟನೆಯನ್ನು ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯಮ್ಮರವರು ಉದ್ಘಾಟಿಸಿ, ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಅಧಿವಕ್ತಾ ಪರಿಷತ್ ನ ಜಿಲ್ಲಾಧ್ಯಕ್ಷರಾದ ಪುಷ್ಪಲತ ಯು.ಕೆ. ಯವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಅಧಿವಕ್ತಾ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷರಾದ ಉಮಾ ಏನ್ ಸೋಮಯಾಜಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಾಗಾರದ ಪ್ರಥಮ ಅವಧಿಯಲ್ಲಿ ಮಹಿಳೆ ಮತ್ತು ಕಾನೂನು ಎಂಬ ವಿಷಯದ ಬಗ್ಗೆ ಮೂಡಬಿದ್ರೆ ಯ ವಕೀಲರಾದ ಶ್ವೇತಾ ಜೈನ್ ರವರು ಮಾಹಿತಿ ನೀಡಿದರು. ಎರಡನೇ ಅವಧಿಯಲ್ಲಿ ಸುಳ್ಯ ಕೆ. ವಿ. ಜೆ. ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾl ಪಿ. ಯಶೋಧ ರಾಮಚಂದ್ರ ರವರು ಸ್ವಾಸ್ತ್ಯ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿಷಯ ಮಂಡಿಸಿದರು.
ಕಾರ್ಯಾಗಾರದ ಸಮಾರೋಪ ಸಭಾರಂಭದಲ್ಲಿ ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಪರಿಷತ್ ನ ಕಾರ್ಯ ಮತ್ತು ವಿಸ್ತಾರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಧ ತಾಲೂಕು ಘಟಕಗಳ ಅಧಿವಕ್ತಾ ವಕೀಲರು, ಬ್ರಾಹ್ಮಣ ಮಹಿಳಾ ಸಂಘದ ಸದಸ್ಯರು, ಮಹಿಳಾ ಸಂಘಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಮೂಡಬಿದ್ರೆಯ ನ್ಯಾಯವಾದಿ ಮೇಘನಾ ವಂದಿಸಿದರು.ಬಿ.ಸಿ.ರೋಡಿನ ನ್ಯಾಯವಾದಿ ಆಶಾಮಣಿ ರೈ ಯವರು ಕಾರ್ಯಕ್ರಮ ನಿರೂಪಿಸಿದರು.