“ಝೇಂಕಾರ” ಬೇಸಿಗೆ ಶಿಬಿರದಲ್ಲಿ ಶ್ರೀರಾಮ ದೇವರ ಮೂರ್ತಿಗೆ ಬಣ್ಣದ ಓಕುಳಿಯ ಅಭುಷೇಕ
ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಎರಡನೇ ದಿನದ “ಝೇಂಕಾರ” ಬೇಸಿಗೆ ಶಿಬಿರದಲ್ಲಿ ಶ್ರೀರಾಮ ದೇವರ ಮೂರ್ತಿಗೆ ಬಣ್ಣದ ಓಕುಳಿಯ ಅಭಿಷೇಕದ ಮೂಲಕ ಅತಿಥಿ ಅಭ್ಯಾಗತರು ಚಾಲನೆ ನೀಡಿದರು.

ಅತಿಥಿಯಾಗಿಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆ ಸಂಯೋಜಕರಾದ ಚಿದಾನಂದ ಕೊಪ್ಪಳ ಅವರು ಮಾತನಾಡಿ “ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡುತ್ತಿರುವ ಶ್ರೀರಾಮ ವಿದ್ಯಾ ಸಂಸ್ಥೆಯ ಮಕ್ಕಳ ಶಿಸ್ತು,ಚಟುವಟಿಕೆಗಳನ್ನು ಕಂಡು ಅತ್ಯನಮತ ಸಂತಸವಾಗಿದೆ.ಪ್ರಾಯಶ: ಈ ವಿದ್ಯಾಸಂಸ್ಥೆ ಇತರ ಶಾಲೆಗಳಿಗೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು. “ಮಕ್ಕಳಿಗೆ ಒಳ್ಳೆಯತನವನ್ನು ಕಲಿಸಿ ಬೆಳೆಸಿದರೆ ಅವರು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಾರೆ, ನಾವು ಸೇವಿಸುವಂತ ಆಹಾರ ಆರೋಗ್ಯಕರವಾಗಿರಬೇಕೆಂದರೆ ಸಾವಯವ ಕೃಷಿ ಉತ್ಪನ್ನಗಳನ್ನೇ ಬಳಸಬೇಕು”. ಎಂದು ಪ್ರಗತಿಪರ ಕೃಷಿಕರು, ಕೃಷಿ ತರಬೇತುದಾರಾದ ರಾಮಣ್ಣ ಸಪಲ್ಯ ಕೊಪ್ಪಳ ಹೇಳಿದರು.

” ಆಧುನಿಕ ಯುಗದಲ್ಲಿನ ಮೊಬೈಲ್, ಟಿವಿಯ ಹೆಚ್ಚಿನ ಬಳಕೆಯಿಂದ ಇಂದಿನ ಮಕ್ಕಳಿಗೆ ಬೇಸಿಗೆ ರಜೆಯ ಮೋಜು,ಮಸ್ತಿಯನ್ನು ಅನುಭವಿಸಲು ಬೇಸಿಗೆ ಶಿಬಿರದ ಅವಶ್ಯಕತೆಯಿದೆ. ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತರಬೇತಿ ಕೊಡುವುದು ಕೂಡ ಅವಶ್ಯವಾಗಿದೆ, ಪ್ರಕೃತಿಯ ಮಧ್ಯೆ ಬದುಕು ಕಟ್ಟಿಕೊಂಡಾಗ ಬದುಕು ಸುಂದರವಾಗುತ್ತದೆ, ವಿಷರಹಿತವಾದ ಸಾವಯವ ಆಹಾರ ಸೇವನೆ, ನೀರಿನ ಸದ್ಬಳಕೆ, ಮರಗಿಡಗಳ ಪೋಷಣೆ ಹೀಗೆ ಪ್ರಕೃತಿಯನ್ನು ರಕ್ಷಣೆ ಮಾಡಬೇಕು”ಎಂದು
ಪ್ರಗತಿಪರ ಕೃಷಿಕರಾದ ಕಮಲಾಕ್ಷ ಶಂಭೂರು ಅವರು ಹೇಳಿದರು.
“ಶಿಸ್ತಿನ ಗುಣಗಳು ಸ್ವಯಂಪ್ರೇರಿತವಾಗಿ ಬರಬೇಕು, ಅಂತಹ ಶಿಸ್ತು ಈ ಶಾಲೆಯಲ್ಲಿ ಸಿಗುತ್ತದೆ. ಪಠ್ಯೇತರ ಚಟುವಟಿಕೆ ಅಥವಾ ಕಾರ್ಯಕ್ರಮದಲ್ಲಿ ಮನಪೂರ್ವಕವಾಗಿ ಭಾಗವಹಿಸಬೇಕು”. ಎಂದು ಕೊಡ್ಮಾಣ್ ಸರಕಾರಿ ಪ್ರೌಢಶಾಲೆ ವಿಜ್ಞಾನ ಅಧ್ಯಾಪಕರಾದ ಭಾರತಿ ರಾವ್ ತಿಳಿಸಿದರು.
ನಂತರ ಸ್ವರ ಸಂಗೀತ ಕಾರ್ಯಕ್ರಮವನ್ನು ಶ್ರೀ ರಾಮ ವಿದ್ಯಾಕೇಂದ್ರದ ಪದವಿ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸಂತೋಷ್ ಬೇಂಕ್ಯ ಇವರು ಗೀತಾ ಗಾಯನ ಹಾಗೂ ವರದರಾಜ್ ನೆತ್ತರಕೆರೆ ಇವರು ನಟನೆಯ ಕುರಿತು ಮಾಹಿತಿ ನೀಡಿದರು.
ಮಧ್ಯಾಹ್ನದ ನಂತರದ ಗೋಷ್ಠಿಯಲ್ಲಿ ಮಲ್ಲಿಕಾಪುರಂ ಚಲನಚಿತ್ರವನ್ನು ವೀಕ್ಷಿಸಲಾಯಿತು.
ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮೊದಲ ದಿನದ ಬೇಸಿಗೆ ಶಿಬಿರದ ವರದಿಯನ್ನು ವಿದ್ಯಾರ್ಥಿ ಭವಿಷ್ ವಾಚಿಸಿದರು.
ಫಾರ್ಚುನ್ ಇಂಡಸ್ಟ್ರೀಸ್ ನ ಪಾಲುದಾರರು ಧೀರಜ್, ಛಾಯಾಗ್ರಾಹಕ ಮನೀಷ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಪ್ರಮೇಯ ತೋಳ್ಪಾಡಿ ಸ್ವಾಗತಿಸಿ, ಸಮರ್ಥ್ ವಿ. ಸಿ ವಂದಿಸಿದರು
ಆರ್ಯನ್ ಕಾರ್ಯಕ್ರಮ ನಿರೂಪಿಸಿದರು , .