ಬಂಟ್ವಾಳ: ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ ಮಹಾಶಿವರಾತ್ರಿ ಆಚರಣೆ

ಬಂಟ್ವಾಳ: ಬೈಪಾಸ್ ಬಳಿಯ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ
ಮಹಾಶಿವರಾತ್ರಿ ಆಚರಣೆಯ ಪ್ರಯಕ್ತ ಫೆ.26 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಗುರುದೇವರಿಗೆ ನಿತ್ಯ ಪೂಜೆಯ ಬಳಿಕ ರಾತ್ರಿ 7 ಗಂಟೆಯವರೆಗೆ ಎಲ್ಲಾ ಭಕ್ತರಿಗೂ ಗರ್ಭಗೃಹ ಪ್ರವೇಶಿಸಿ ಗುರುದ್ವಯರ ದರ್ಶನ, ಸ್ವತಃ ಗುರುದ್ವಯರಿಗೆ ಆರತಿ ಮಾಡುವ ಅವಕಾಶವು ಇರುತ್ತದೆ ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ,ಸಂಜೆ 4 ರಿಂದ ರಾತ್ರಿ9 ಗಂಟೆಯವರೆಗೆ ಭಜನಾ ಸಂಕೀರ್ತನೆ,ರಾತ್ರಿ 9ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ರಾತ್ರಿ 10 ಕ್ಕೆ ಮಂದಿರದಿಂದ ನಾಮ ಸಂಕೀರ್ತನದ ಮೂಲಕ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರಕ್ಕೆ ನಗರ ಭಜನೆ ಹೊರಡಲಿದೆ. ನಂತರ ಬಡ್ಡಕಟ್ಟೆ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.