ಬಂಟ್ವಾಳ: ಓಂ ಸಾಯಿ ಗೆಳೆಯರ ಬಳಗ ಹನುಮಾನ್ ನಗರ ಬರಿಮಾರು ಇದರ ಏಳನೇ ವರ್ಷದ ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ: ಓಂ ಸಾಯಿ ಗೆಳೆಯರ ಬಳಗ ಹನುಮಾನ್ ನಗರ ಬರಿಮಾರು ಇದರ ಆಶ್ರಯದಲ್ಲಿ ಏಳನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ನಡೆದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬರಿಮಾರು ಗ್ರಾಮದ ವಿಶೇಷ ಪ್ರತಿಭೆಗಳನ್ನು ಅಭಿನಂದಿಸಲಾಯಿತು.
ರಾಷ್ಟ್ರಮಟ್ಟದ ಈಜು ಪಟುಗಳು ಸಹೋದರಿಯರಾದ ಅನನ್ಯ ಎ.ಆರ್ ಮತ್ತು ಅನರ್ಘ್ಯ ಎ.ಆರ್, ವೈಟ್ ಲಿಪ್ಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ರಕ್ಷಾ ಗೋಪುಕೋಡಿ ,ವಾಲಿಬಾಲ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಸ್ವಸ್ತಿಕ್ ಬುಡೋಳಿ ಓಂ ಸಾಯಿ ಗೆಳೆಯರ ಬಳಗದ ಸದಸ್ಯ ಕಾರ್ತಿ ಮತ್ತು ಮಹಮ್ಮಾಯಿ ಸೌಂಡ್ಸ್ ಮತ್ತು ಲೈಟಿಂಗ್ಸ್ ನ ಶರತ್ ಬಲ್ಯ ಅಭಿನಂದಿಸಲಾಯಿತು.
ಶ್ರೀ ಮಹಾಕಾಳಿ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವಿಶ್ವನಾಥ ದರ್ಬೆ, ಬರಿಮಾರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರ್, ಗ್ರಾಮ ಪಂಚಾಯತಿನ ಮಾಜಿ ಸದಸ್ಯ ಜಯಂತ ಮುಳಿಬೈಲ್, ಶ್ರೀದೇವಿ ಟ್ರಸ್ಟ್ ನ ಅಧ್ಯಕ್ಷರಾದ ಸುಧಾಕರ ಸಪಲ್ಯ ತಿಮ್ಮಾಯರೆಕೋಡಿ ,ಬರಿಮಾರು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸದಾಶಿವ ಜಿ ,ಜಿಲ್ಲಾ ಪಂಚಾಯತಿನ ಮಾಜಿ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರುತಿ ಪೂಜಾರಿ,ಮಾತೃಭೂಮಿ ಕನ್ಸ್ಟ್ರಕ್ಷನ್ ನ ಸದಾನಂದ ಬರಿಮಾರು, ಉದ್ಯಮಿ ಅಬ್ದುಲ್ ಸಲೀಂ ಶಿವಾಜಿ ಫ್ರೆಂಡ್ಸ್ ನ ಅಶ್ವಥ್ ಶಿವಾಜಿ ನಗರ , ಓಂ ಸಾಯಿ ಫ್ರೆಂಡ್ಸ್ ನ ಅಧ್ಯಕ್ಷ ನವೀನ್ ತಿಮ್ಮಾಯರೆ ಕೋಡಿ,ಸದಸ್ಯ ವಿನಯ ಕುಮಾರ್ ಪಾಪೆತ್ತಿಮಾರು ಉಪಸ್ಥಿತರಿದ್ದರು.