ಬಂಟ್ವಾಳ ಸ.ಸೇ. ಸ. ಸಂಘಕ್ಕೆ ಸುರೇಶ್ ಕುಲಾಲ್ ಬಂಟ್ವಾಳ ಸತತ ನಾಲ್ಕನೆ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ,ಉಪಾಧ್ಯಕ್ಷರಾಗಿ ಜನಾರ್ದನ ಬೊಂಡಾಲ
ಬಂಟ್ವಾಳ: ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳಇದರ ಮುಂದಿನ 5 ವರ್ಷಗಳ ಅವಧಿಯಆಡಳಿತ ಮಂಡಳಿಗೆ ಸತತ ನಾಲ್ಕನೆ ಬಾರಿಗೆ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಬಂಟ್ವಾಳ ಆಯ್ಕೆಯಾಗಿದ್ದಾರೆ.

ಹಾಗೆಯೇ ನೂತನ ಉಪಾಧ್ಯಕ್ಷರಾಗಿ ಜನಾರ್ದನ ಬೊಂಡಾಲ ಅವರುಆಯ್ಕೆಯಾಗಿದ್ದಾರೆ.ಇವರಿಬ್ಬರು ಕೂಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಪುತ್ತೂರು ತಾಲೂಕು ಸಹಕಾರಿ ಅಧಿಕಾರಿ ರಘ ಅವರು ಚುನಾವಣಾಧಿಕಾರಿಯಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಿಯೆ ನಡೆಸಿದರು. ಸಂಘದ ಸಿಒ ಬೋಜ ಮೂಲ್ಯ ಹಾಗೂ ಸಿಬ್ಬಂದಿಗಳು ಸಹಕರಿಸಿದ್ದರು.
ನೂತನ ನಿರ್ದೇಶಕರಾದ ಅರುಣ್ ,ಅರುಣ್ ಕುಮಾರ್ ಕೆ.,ಕಿರಣ್ ಕುಮಾರ್ ಎ., ಪ್ರೇಮನಾಥ ಬಂಟ್ವಾಳ,ಭೋಜ ಸಾಲಿಯಾನ್,ರಮೇಶ್ ಸಾಲಿಯಾನ್ ,ಸತೀಶ್ ಕುಲಾಲ್ ,ರಮೇಶ್ ಸಾಲಿಯಾನ್ ಬಿ., ಸುರೇಶ್ ಕುಲಾಲ್ ಎನ್ ,ಹರೀಶ್ , ಮಾಲತಿ ಮಚ್ಚೇಂದ್ರ,ರೇಖಾ ನಾಯ್ಕ್ , ವಿದ್ಯಾ, ಜಗನ್ನಿವಾಸ ಗೌಡ, ಗಣೇಶ್ ಸಮಗಾರ ಹಾಜರಿದ್ದರು.
ಮಾಜಿ ಪುರಸಭಾಧ್ಯಕ್ಷ ದಿನೇಶ್ ಭಂಡಾರಿ,ಪುರಸಭಾ ಸದಸ್ಯರಾದ ಹರಿಪ್ರಸಾದ್ , ಮೀನಾಕ್ಷಿ ಜೆ.ಗೌಡ,ಬಿಜೆಪಿ ಮುಖಂಡರಾದ ದಿನೇಶ್ ಅಮ್ಟೂರು, ಯಶೋಧರಕರ್ಬೆಟ್ಟು,ಪುರುಷೋತ್ತಮ ಸಾಲಿಯಾನ್ನರಿಕೊಂಬು,ಬಂಟ್ವಾಳ ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ ಬಿ. ಸಹಿತ ಹಲವಾರು ಪ್ರಮುಖರು,ಸಹಕಾರಿಗಳು ನೂತನ ಅಧ್ಯಕ್ಷ – ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.