ಸ್ಪರ್ಶಾ ಪಂಜಿಕಲ್ಲು ಭರತನಾಟ್ಯ ಸೀನಿಯರ್ ಪರಿಕ್ಷೆಯಲ್ಲಿ ಶೇ.90.6 ಅಂಕ

ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಬಸ್ತಿಕೋಡಿ ನೃತ್ಯಾಂಜಲಿ ನಾಟ್ಯಶಾಲೆಯ ವಿದ್ಯಾರ್ಥಿನಿ ಸ್ಪರ್ಶಾ ಪಂಜಿಕಲ್ಲು ಇವರು ಭರತನಾಟ್ಯ ಸೀನಿಯರ್ ಪರಿಕ್ಷೆಯಲ್ಲಿ ಶೇ.90.6 ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ವಿದುಷಿ ವಿನುತ ಪ್ರವೀಣ್ ಗಟ್ಟಿ ಅವರ ಶಿಷ್ಯೆಯಾಗಿದ್ದು,ಬಂಟ್ವಾಳ ತಾ.ನ ಪಂಜಿಕಲ್ಲು ನಿವಾಸಿ ಪದ್ಮನಾಭ ಮಡಿವಾಳ ಮತ್ತು ಶೋಭಾ ದಂಪತಿಯ ಪುತ್ರಿಯಾಗಿದ್ದಾಳೆ.