ಅಂತರ್ ಜಿಲ್ಲಾ ‘ನೆಕ್ಸ್ ಪ್ಲೋರರ್ ಕಾರ್ನಿವಲ್ 2025 ‘ಪ್ರಶಸ್ತಿ ಜಯಿಸಿದ ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲೆ
ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ನೆಕ್ಸ್ ಪ್ಲೋರರ್ ಕಾರ್ನಿವಲ್ ‘ ಪ್ರಶಸ್ತಿಯನ್ನು ಪುಂಜಾಲಕಟ್ಟೆನಾರಾಯಣ ಗುರು ವಸತಿ ಶಾಲೆ ಗೆದ್ದುಕೊಂಡಿದೆ.

ಯುವ ನಾವೀನ್ಯಕಾರರಿಗೆ ಶೆಲ್ ಫೆಸಿಲಿಟೇಟರ್‌ಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ ತಮ್ಮ ನವೀನ ಸ್ಟೆಮ್ ಯೋಜನೆಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸಲಾಗಿತ್ತು.ವಿದ್ಯಾರ್ಥಿಗಳ ವೈಜ್ಞಾನಿಕ ಜಾಣ್ಮೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಪ್ರತಿಬಿಂಬಿಸುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ఒಟ್ಟು 39 ಸೃಜನಶೀಲ ಯೋಜನೆಗಳನ್ನು ಪ್ರದರ್ಶಿಸಲಾಯಿತು.
ಪೂಂಜಾಲಕಟ್ಟೆಯ ನಾರಾಯಣ ಗುರು ವಸತಿ ಶಾಲೆಯ ಭವಿತ್, ಧಾರ್ಮಿಕ್ ಮತ್ತು ಪ್ರೇರಣ್.ಎ.ಎಲ್ ಅವರು ಪ್ರಸ್ತುತಪಡಿಸಿದ ನವೀನ ಯೋಜನೆ “ಸ್ಮಾಟ್೯ ವರ್ಕಿಂಗ್ ಸಿಸ್ಟಮ್”ಗಾಗಿ ಮೊದಲ ಬಹುಮಾನವನ್ನು ಪಡೆದಿದೆ.
ಕಾರ್ಯಕ್ರಮದಲ್ಲಿ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಮತ್ತು ಉಡುಪಿ ಡಯಟ್ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಸೇರಿದಂತೆ ಗಣ್ಯರು ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು.