ಪಾಣೆಮಂಗಳೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ: ವಿ.ವಿ.ಎನ್ ಹೆಲ್ತ್ಕೇರ್ ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯಕ್ತ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎ.ಜೆ. ಆಸ್ಪತ್ರೆ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ” ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ನಡೆಯಿತು.

ಪಾಣೆಮಂಗಳೂರು ಎಜುಕೇಶನ್ ಸೊಸೈಟಿ ಅಧ್ಯಕ್ಷರಾದಎನ್. ನರೇಂದ್ರಕುಡ್ವ ಶಿಬಿರವನ್ನು ಉದ್ಘಾಟಿಸಿದರು. ಐ.ಎಮ್.ಎ. ಅಧ್ಯಕ್ಷರಾದ ಡಾ. ಪ್ರದೀಪ್ ಕುಮಾರ್ ಶೆಟ್ಟಿ, ಶಾರದಾ ಪ್ರೌಡಶಾಲೆಯ ಸಂಚಾಲಕರಾದ ಡಾ. ವಿಶ್ವನಾಥ ನಾಯಕ್, ವಿ.ವಿ.ಎನ್ ಹೆಲ್ತ್ಕೇರ್‌ನ ಡಾ. ವಾಮನ ನಾಯಕ್ ಎ.ಜೆ. ಗ್ರಾಮಿಣ ತರಬೇತಿ ಕೇಂದ್ರದ ಮಹಿಳಾ ವೈದ್ಯಾಧಿಕಾರಿ ಡಾ.ಜಯಮಾಲ ವಿಶ್ವಾನಾಥ ಉಪಸ್ಥಿತರಿದ್ದರು.
ಎ.ಜೆ.ಯ ಹೃದೋಗ ತಜ್ಙರಾದ ಡಾ.ಹಂಸ , ಸಮುದಾಯ ವಿಭಾಗದ ಡಾ. ಜಯಶಂಕರ, ಎ.ಜೆ.ಯ ಕಿರಿಯ ವೈದ್ಯರು ಆರೋಗ್ಯ ತಪಾಸಣೆಗೈದರು. ಸುಮಾರು ೧೦೦ ಕ್ಕೂ ಅಧಿಕ ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.