ಬಂಟ್ವಾಳ : ತಾಲೂಕಿನ  ಚೆನ್ನೈತೋಡಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ    ಶೌಚಾಲಯದ ನೀರಿನ ವ್ಯವಸ್ಥೆಗೆ ಸಮಸ್ಯೆಯಾಗಿರುವ ಹಿನ್ನಲೆಯಲ್ಲಿ ವಾಮದಪದವು ಶೌರ್ಯ ವಿಪತ್ತು ನಿರ್ವಹಣಾ ಘಟಕ ಶ್ರಮಮಾಧಾನ ಸೇವೆ ಮೂಲಕ ದುರಸ್ತಿ ಮಾಡಿಕೊಟ್ಟಿತು.

ಶೌಚಾಲಯದ ಪೈಪ್ ಲೈನ್  ಸಮಸ್ಯೆಯನ್ನು ಪರಿಹರಿಸುವಂತೆ ಕೋರಿ ಶಾಲಾ ಮುಖ್ಯ ಶಿಕ್ಷಕರು ಶೌರ್ಯ ಘಟಕಕ್ಕೆ ಮನವಿ ಮಾಡಿದ್ದರು.ವಾಮದಪದವು ಶೌರ್ಯ ವಿಪತ್ತು ನಿರ್ವಹಣಾ  ಘಟಕ ಇದಕ್ಕೆ ತುರ್ತು ಸ್ಪಂದಿಸಿ ಶ್ರಮಮಾಧಾನ ಸೇವೆ ಮೂಲಕ  ದುರಸ್ತಿ ಮಾಡಿಕೊಟ್ಟು ಸಮಸ್ಯೆಯನ್ನು ಬಗೆಹರಿಸಿದಲ್ಲದೆ ಇಲ್ಲಿನ ಅಂಗನವಾಡಿ ಮತ್ತು ಶಾಲಾ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಿದರು.

 ಈ ಸೇವಾ ಕಾರ್ಯದಲ್ಲಿ ಇರ್ವತ್ತೂರು ಸೇವಾ ಪ್ರತಿನಿಧಿ  ಭಾರತೀ, ಕೊಡಂಬೆಟ್ಟು ಸೇವಾ ಪ್ರತಿನಿಧಿ  ಮೋಹನ್ ದಾಸ್ ಗಟ್ಟಿ, ಶೌರ್ಯ ಘಟಕ ಸದಸ್ಯರುಗಳಾದ ಪ್ರಕಾಶ್, ಮಾಧವ,ಚೇತನ್,ರಾಜೇಶ್,ಯಶೋದರ,ತಾರಾನಾಥ್, ಗಿರೀಶ್, ದನವತಿ,ಸುರೇಶ, ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *