ಕುಪ್ಪೆಟ್ಟುಪಂಜುರ್ಲಿ ಮೂಲಸ್ಥಾನಕ್ಕೆ ಹೊರೆಕಾಣಿಕೆಯ ಅದ್ದೂರಿ ಮೆರವಣಿಗೆ
ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಸಮೀಪದ ಕರ್ಪೆ ಗ್ರಾಮದ ಕುಪ್ಪೆಟ್ಟು ಬರ್ಕೆ ಎಂಬಲ್ಲಿ ಪುನರ್ ನಿರ್ಮಾಣಗೊಂಡ ಕುಪ್ಪೆಟ್ಟುಪಂಜುರ್ಲಿ ಮೂಲಸ್ಥಾನಕ್ಕೆ ಹೊರೆಕಾಣಿಕೆಯ ಅದ್ದೂರಿ ಮೆರವಣಿಗೆಯು ಭಾನುವಾರ ಸಂಜೆ ನಡೆಯಿತು.

ಫೆ. 18 ರಿಂದ 22ರವರೆಗೆ ಇಲ್ಲಿ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವ ನಡೆಯಲಿದ್ದು, ಸಂಗಬೆಟ್ಟು ವೀರಭದ್ರ ದೇವಸ್ಥಾನ ಬಳಿ ಅರ್ಚಕ ಪ್ರಭಾಕರ ಐಗಳ್ ಅವರು ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಚಂದ್ರಹಾಸ ಗುರಿಕಾರ, ಸಂಗಬೆಟ್ಟು, ಓಬಯ ಗುರಿಕಾರ ಕೋರ್ಯಾರು ಈ ಸಂದರ್ಭ ಉಪಸ್ಥಿತರಿದ್ದರು.
ಹೊರೆಕಾಣಿಕೆ ಮೆರವಣಿಗೆಯಲ್ಲಿ ದೈವದ ಮಂಚ ಪೀಠ, ಗಂಟೆ ಮತ್ತಿತರ ವಸ್ತುಗಳು ಗಮನ ಸೆಳೆದವು. ಚೆಂಡೆ, ವಾದ್ಯ, ಕೊಂಬು, ತಾಸೆ, ನೃತ್ಯ, ಭಜನೆಯೊಂದಿಗೆ ಮಹಿಳಾ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕುಪ್ಪೆಟ್ಟು ಬರ್ಕೆ ಪಂಜುರ್ಲಿ ಮೂಲಸ್ಥಾನ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸನಿಲ್, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ
ಸಂತೋಷ ಕುಮಾರ್ ರಾಯಿಬೆಟ್ಟು,ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ದೇವಪ್ಪ ಕರ್ಕೇರ ,ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಪೂಜಾರಿ, ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಸುವರ್ಣ, ಪ್ರಮುಖರಾದ ಕಿರಣ್ ಕುಮಾರ್ ಮಂಜಿಲ,
ಗೀತಾಂಜಲಿ ಸುವರ್ಣ,ಉದಯ ಪೂಜಾರಿ,ಮೋನಪ್ಪ ಪೂಜಾರಿ ಬೊಟ್ಟಿಕಂಡ, ದಾಮೋದರ ಪೂಜಾರಿ,ನವೀನ್ ಪೂಜಾರಿ,ಸತೀಶ್ ಮಠ,ದುರ್ಗಾದಾಸ್ ಶೆಟ್ಟಿ, ಜೆ.ರವೀಂದ್ರಪೂಜಾರಿ ಬದಿನಡೆ,ಜಯಪೂಜಾರಿ ಕುಪ್ಪೆಟ್ಟು,ಪ್ರಭಾಕರ ಹುಲಿಮೇರು,ರಂಜಿನಿ ದಿವಾಕರ್,ಪ್ರೀತಿ ವಸಂತ್,ದಿನೇಶ್ ಶೆಟ್ಟಿ ದಂಬೆದಾರ್,ಡೊಂಬಯ್ಯಅರಳ,ಸಂತೋಷ್ ಪೂಜಾರಿ,ಯೋಗೀಶ್ ಪೂಜಾರಿ,ಗಣೇಶ್ ಪೂಜಾರಿ,ತೇಜಸ್ ಪೂಜಾರಿ,ಸುಭಾಸ್ ಪೂಜಾರಿ,ಶೇಖರ್ ಅಂಚನ್ ಪಿಲ್ಕಾಜೆಗುತ್ತು,ಜಗದೀಶ್ ಕೊಯಿಲ,ಸಮಕತೋಷ್ ಕುಮಾರ್ ಚೌಟ,ನೋಣಯ್ಯ ಶೆಟ್ಟಿಗಾರ್,ಪ್ರವೀಣ್ ಪೂಜಾರಿ ಕುಪ್ಪೆಟ್ಟು,ವಾಮನ ಬನ್ನಾನ,ರಶ್ಮಿತ್ ಶೆಟ್ಟಿ,ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್ ಮತ್ತಿತರರು ಇದ್ದರು.
ಈ ಸಂದರ್ಭಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಪ್ರತಿಷ್ಠಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಹಸಿರು ಹೊರಕಾಣಿಕೆ ಕ ದೈವ ಭಕ್ಷರ ಸಮೂಹ ಮೂಲಸ್ನಾನಕ್ಕೆ, ಆಗಮಿಸಿದರು