ಬಾಗಲಕೋಟೆ: ಕಳ್ಳರನ್ನು ಹಿಡಿಯಲು ಪೊಲೀಸರ ಜೊತೆ ರಾತ್ರಿ ಗಸ್ತು ತಿರುಗುವ ಮಹಿಳೆಯರು

ಬಾಗಲಕೋಟೆ: ಬಾಗಲಕೋಟೆಯ ಮುಧೋಳದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ತಿರುಗುವ ಪೊಲೀಸರ ಜೊತೆ ಸಹಕರಿಸಲು ಮಹಿಳೆಯರು ಕೈಯಲ್ಲಿ ಕೋಲು ಹಿಡಿದು ರಸ್ತೆಗೆ ಇಳಿದಿದ್ದಾರೆ. ಕಳ್ಳತನ ಸಂಶಯದ ಮೇಲೆ ಸ್ಥಳೀಯರು ಇಬ್ಬರ ಮೇಲೆ ಹಲ್ಲೆ ಮಾಡಿ ಕಳಿಸಿದ್ದಾರೆ. ಮುಧೋಳ ಜಯನಗರದ ಮಹಿಳೆಯರು ರಾತ್ರಿ ಪೂರ್ತಿ ಓಣಿಯಲ್ಲಿ ರೌಂಡ್ಸ್ ಆಗುತ್ತಿದ್ದಾರೆ.