ಬಂಟ್ವಾಳ: ರಾಸುಗಳ ಆರೋಗ್ಯ ತಪಾಸಣೆ, ಬಂಜೆತನ ನಿವಾರಣಾ ಕಾರ್ಯಕ್ರಮ

ಬಂಟ್ವಾಳ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸಂಘದ ವ್ಯಾಪ್ತಿಯ ರಾಸುಗಳ ಅರೋಗ್ಯ ತಪಾಸಣೆ, ಬಂಜೆತನ ನಿವಾರಣಾ ಕಾರ್ಯಕ್ರಮ ನಡೆಯಿತು. ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜು ಪ್ರಾಧ್ಯಪಕರಾದ ಡಾ, ಎನ್. ಬಿ. ಶ್ರೀಧರ್, ದ. ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ, ಚಂದ್ರಶೇಖರ ಭಟ್, ಡಾ, ಚರಣ್, ಡಾ, ಪೂಜಾ ಅವರು ಮಾಹಿತಿ ನೀಡಿದರು.
ಇದೇ ವೇಳೆ ವಾಮದಪದವು ಹಾ.ಉ.ಸ ಸಂಘ ಮತ್ತು ಸುತ್ತಮುತ್ತಲಿನ ಹಾ.ಉ.ಸ.ಸಂಘಗಳ 42 ಹಸುಗಳ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲಾಯಿತು. ಸಂಘದ ನಿರ್ದೇಶಕರು,ವಿವಿಧ ಹಾ.ಉ.ಸ. ಸಂಘಗಳ ಅಧ್ಯಕ್ಷರು, ಸಿಬ್ಬಂದಿಗಳು ಭಾಗವಹಿದ್ದರು, ವಿಸ್ತರಣ ಅಧಿಕಾರಿ ಜಗದೀಶ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಶೆಟ್ಟಿ ವಂದಿಸಿದರು