ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಡಕಬೈಲಿನ ಇಬ್ರಾಹಿಂ ನವಾಝ್ ಆಯ್ಕೆ

ಬಂಟ್ವಾಳ: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಿ.ಸಿ.ರೋಡಿಗೆ ಸಮೀಪದ ಬಡಕಬೈಲಿನ ಇಬ್ರಾಹಿಂ ನವಾಝ್ ಅವರು ಆಯ್ಕೆಗೊಂಡಿದ್ದಾರೆ. ಯುವ ಕಾಂಗ್ರೆಸ್ನ ರಾಜ್ಯ,ಜಿಲ್ಲಾ ಹಾಗೂ ಬ್ಲಾಕ್ ಸಹಿತ ವಿವಿಧ ಹುದ್ದೆಗಳಿಗೆ 2024ರ ಆಗಸ್ಟ್ ನಲ್ಲಿ ಮತದಾನ ನಡೆದಿದ್ದು, ಫೆ. 7ರಂದು ಫಲಿತಾಂಶ ಪ್ರಕಟಗೊಂಡಿದೆ. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, 10,942 ಮತಗಳನ್ನು ಗಳಿಸಿ ನವಾಝ್ ಅವರು ಆಯ್ಕೆಗೊಂಡಿದ್ದಾರೆ. ಈ ಹಿಂದೆ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅನುಭವವನ್ನು ಹೊಂದಿದ್ದಾರೆ.