ಫೆ. 13 ರಿಂದ ೧೫ರತನಕ
ಗುರುಪುರ ಬಂಡಿ ಜಾತ್ರೆ
ಗುರುಪುರ : ಗುರುಪುರದ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ `ಬಂಡಿ’ ಜಾತ್ರೆ ಫೆ. ೧೩ರಿಂದ ೧೫ವರೆಗೆ ನಡೆಯಲಿದೆ.

ಫೆ. ೧೩ರಂದು ಮುಂಜಾನೆ ೫ ಗಂಟೆಗೆ ಭಂಡಾರ ಮನೆಯಿಂದ ದೈವಸ್ಥಾನಕ್ಕೆ ಶ್ರೀ ದೈವಗಳ ಭಂಡಾರ ಹೊರಡಲಿದೆ. ಬೆಳಿಗ್ಗೆ ೮:೩೦ಕ್ಕೆ ಧ್ವಜಾರೋಹಣ, ೧೧ರಿಂದ ೧ರತನಕ ಕಂಚಿಲು ಸೇವೆ ಮತ್ತು ಉರುಳು ಸೇವೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೮ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ ೧೦ರಿಂದ ಶ್ರೀ ಮುಂಡಿತ್ತಾಯ ದೈವದ ನೇಮ, ಮುಂಜಾನೆ ಬಂಡಿ ರಥೋತ್ಸವ, ಅಭಯ ಪ್ರದಾನ, ಪ್ರಸಾದ ವಿತರಣೆಯಾಗಲಿದೆ.
ಫೆ. ೧೪ರಂದು ರಾತ್ರಿ ೭ರಿಂದ ಶ್ರೀ ಧೂಮಾವತಿ, ಬಂಟ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ಫೆ. ೧೫ರಂದು ರಾತ್ರಿ ೭ಕ್ಕೆ ತುಡಾರ ಬಲಿ ಉತ್ಸವ, ಧ್ವಜಾವರೋಹಣ ಹಾಗೂ ಭಂಡಾರ ನಿರ್ಗಮನವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.