ಶ್ರೀ ಕ್ಷೇತ್ರ ಮಾದು ಕೋಡಿ ಸ್ವಾಮಿ ಕೊರಗಜ್ಜ ದೈವ ಸನ್ನಿಧಿಯಲ್ಲಿ ಫೆಬ್ರವರಿ 08 ರಂದು ಕೋಲಸೇವೆ
ಬಂಟ್ವಾಳ : ಫೆಬ್ರವರಿ 08 ರಂದು ಶನಿವಾರ ಮಾದು ಕೋಡಿ ಸ್ವಾಮಿ ಕೊರಗಜ್ಜ ದೈವ ಸನ್ನಿಧಿಯಲ್ಲಿ ಕೋಲ ಸೇವೆಯು ನಡೆಯಲಿದೆ.ಫೆಬ್ರವರಿ 07 ರಂದು ಶುಕ್ರವಾರ ಬೆಳಿಗ್ಗೆ 7:00ಕ್ಕೆ ಶ್ರೀ ನಾಗದೇವರ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪವಮಾನ ಅಭಿಷೇಕ ಅಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ಹಾಗೂ ಸ್ವಾಮಿ ಪಟ್ಟದ ಪಂಜುರ್ಲಿ ಮತ್ತು ಶ್ರೀ ಶ್ರೀ ಗುಳಿಗ ದೈವಕ್ಕೆ ಪರ್ವ ಸೇವೆಯು ನಡೆಯಲಿರುವುದು.

ಮಧ್ಯಾಹ್ನ ಗಂಟೆ 12:00ಕ್ಕೆ ಪ್ರಸನ್ನ ಪೂಜೆ ಹಾಗೂ ಪ್ರಸಾದ ವಿತರಣೆ 1:00 ಗಂಟೆಯಿಂದ ಅನ್ನ ಸಂಪರ್ಕನೆ ಸೇವೆಯು ನಡೆಯಲಿದೆ.
ಫೆಬ್ರವರಿ 08 ರಂದು ಶನಿವಾರ
ಕಾರ್ಯಕ್ರಮಗಳು
ಬೆಳಿಗ್ಗೆ ಗಂಟೆ 8:00 ರಿಂದ ಗಣಹೋಮ , ಶುದ್ಧ ಕಲಶ ಕಲಾ ಹೋಮ ನವಕ ಪ್ರಧಾನ ಮಧ್ಯಾಹ್ನ ಗಂಟೆ 12:00 ಕ್ಕೆ ಪ್ರಸನ್ನ ಪೂಜೆ. 1:00 ಗಂಟೆಯಿಂದ ಮಹಾ ಅನ್ನ ಸಂತರ್ಪಣೆ.
ಬೆಳಿಗ್ಗೆ 8:00 ಗಂಟೆಯಿಂದ ಶ್ರೀ ಕಾಳಿಕಾಂಬ ಸಾನಿಧ್ಯ ಭಜನಾ ಮಂಡಳಿ ಮುದೈಕೋಡಿ, ಶ್ರೀ ವಿನಾಯಕ ಭಜನಾ ಮಂಡಳಿ ಅಮುಂಜೆ, ಓಂಕಾರ ಭಜನಾ ಮಂಡಳಿ ಅಖಿಲೇಶ್ವರ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೊಳಲಿ, ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ ಮಾಡಿಕೋಡಿ ಇವರಿಂದ ಭಜನಾ ಸಂಕೀರ್ತನೆ.
ಮಧ್ಯಾಹ್ನ ಗಂಟೆ 1:30 ರಿಂದ ಸಂಜೆ 3:50 ವರೆಗೆ ಕಲರ್ಸ್ ಕನ್ನಡ ಖ್ಯಾತಿಯ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ತುಳುನಾಡ ಗಾಣಗಂಧರ್ವ ಬಿರುದಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ
” ಸಂಗೀತ ಗಾನ ಸಂಭ್ರಮ “
ಸಂಜೆ 4 ಗಂಟೆಯಿಂದ ಶ್ರೀ ಆದಿಶಕ್ತಿ ಭಜನಾ ಮಂಡಳಿ ಬಡಗ ಬೆಳ್ಳೂರು ಕುಣಿತ ಭಜನೆ
ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇರುವೈಲ್ ಇವರಿಂದ ಭಜನೆ ಸಂಕೀರ್ತನೆ.
ಹಾಗೂ ಸಂಜೆ 6:30 ರಿಂದ ಕೋಲಸೇವೆರಾತ್ರಿ 7:30 ರಿಂದ ಪ್ರಸಾದ ವಿತರಣೆ 8:00 ಗಂಟೆಯಿಂದ ಅನ್ನ ಪ್ರಸಾದ ಸೇವೆಯು ನಡೆಯಲಿರುವುದು.
ಫೆಬ್ರವರಿ 10 ರಂದು ಸೋಮವಾರ ಸಂಜೆ 5:00 ರಿಂದ ಸ್ವಾಮಿ ಕೊರಗಜ್ಜನಿಗೆ ವಾರ್ಷಿಕ ವಿಶೇಷ ಸೀಯಾಳ ಅಭಿಷೇಕ ಹಾಗೂ ವಾರ್ಷಿಕ ಕ್ಷೀರ ಅನ್ನಸೇಯು ನಡೆಯಲಿದೆ.
ಸಂಜೆ 5:00 ರಿಂದ ಶ್ರೀ ಭದ್ರಕಾಳಿ ಭಜನಾ ಮಂಡಳಿ ಬೆಂಜನ ಪದವು , ಶ್ರೀ ಗರುಡ ಮಹಾಕಾಳಿ ಭಜನಾ ವೃಂದ ಅರಳ ಕುಣಿತ ಭಜನೆ , ಈಶ್ವರಿ ಭಜನಾ ಮಂಡಳಿ ಕಾಂಜೀಲಕೋಡಿ ಇವರಿಂದ ಭಜನ ಸಂಕೀರ್ತನೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.