ಕಾವಳಮೂಡೂರು ಗ್ರಾ.ಪಂ.ನಲ್ಲಿ ತೆಂಗಿನ ಸಸಿ ವಿತರಣೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು,ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್. ಆರ್. ಎಲ್ .ಎಂ.ಸಂಜೀವಿನಿ ಬಂಟ್ವಾಳ ತಾಲೂಕು ಇವರ ಸಹಭಾಗಿತ್ವದಲ್ಲಿಕಾವಳಮೂಡೂರು ಗ್ರಾಮ ಪಂಚಾಯತ್ ನ ಸಹಕಾರದಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ತೆಂಗಿನಸಸಿ ವಿತರಣಾ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಜಿತ್ ಶೆಟ್ಟಿ,ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಟಿ ಜೆ ರಮೇಶ್ ರವರುಫಲಾನುಭವಿಗಳಿಗೆ ಗಿಡ ವಿತರಿಸಿದರು.ಕಾಸರಗೋಡು
ಸಿ. ಪಿ. ಸಿ. ಆರ್. ಐ. ನ ವಿಜ್ಞಾನಿ ಡಾ. ರಾಜ್ ಕುಮಾರ್ ರವರು ತೆಂಗಿನ ಗಿಡದ ನಾಟಿ ಕ್ರಮ ಹಾಗೂ ಪೋಷಣೆಯ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಚನ್ ಕುಮಾರ್, ಉಪಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಎನ್.ಆರ್.ಎಲ್.ಎಂ ನ ತಾಲೂಕು ವ್ಯವಸ್ಥಾಪಕಿ ಕು |ಸಾಂಘವಿ ಹಾಗು ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬಂಟ್ವಾಳ ತಾಲೂಕಿನಲ್ಲಿ 373 ಫಲಾನುಭವಿಗಳಿಗೆ ತಲಾ ಎರಡೆರಡು ಸಸಿಯಂತೆ 746 ಸಸಿಗಳನ್ನು ವಿತರಿಸಲಾಯಿತು.