ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ
ಬಂಟ್ವಾಳ:ಇಲ್ಲಿಯ ತಾಲೂಕಿನ ಬಾಳ್ರಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಬ್ರಹ್ಮರಥೋತ್ಸವವು ದಾಬೋಳಿ ಮಠ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗುರುವಾರ ರಾತ್ರಿ ಸಂಭ್ರಮ ,ಸಡಗರದಿಂದ ನಡೆಯಿತು.

ಇದಕ್ಕು ಮುನ್ನ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದಾಬೋಳಿ ಮಠ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದೇವಳದ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಜೆ ನೂತನ ಬ್ರಹ್ಮ ರಥ ಸಮರ್ಪಣೆಯ ಬಳಿಕ ವೈಭವದ ರಥೋತ್ಸವವು ನೆರವೇರಿತು.ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಭಾಗವಹಿಸಿ ಸ್ವಾಮೀಜಿಯವರ ಆರ್ಶೀವಾದವನ್ನು ಪಡೆದರು.ದೇವಳದ ಆಡಳಿತ , ಜೀಣೋದ್ದಾರ ಸಮಿತಿ ಪದಾಧಿಕಾರಿಗಳು,ಹಲವಾರು ಗಣ್ಯರು,ಸಮಾಜದ ಪ್ರಮುಖರು ಮತ್ತು ಭಗವದ್ಬಕ್ತರು ಉಪಸ್ಥಿತರಿದ್ದರು.
ಶುಕ್ರವಾರ ಬೆಳಿಗ್ಗೆ ಆರಾಟಬಲಿ, ಓಕುಳಿ, ಅವಭೃತಸ್ನಾನ,ದರ್ಶನಬಲಿ,ರಾಜಾಂಗಣಪ್ರಸಾದ,ಬಟ್ಟಲುಕಾಣಿಕೆ,ಧ್ವಜಾವರೋಹಣ,ಮಧ್ಯಾಹ್ನ ಮಹಾಪೂಜೆ,ಮಂತ್ರಾಕ್ಷತೆಯ ಬಳಿಕ ಅನ್ನಸಂತರ್ಪಣೆಯು ನಡೆಯಿತು.ರಾತ್ರಿಕ್ಷೇತ್ರದ ದೈವಗಳಿಗೆ ನೇಮೋತ್ಸವ ನಢಯಿತು.