ನಾವೂರು ಶ್ರೀ ಗೋಪಾಲಕೃಷ್ಣ ದೇವಳದ ದೇವರ ಉತ್ಸವ ವಿವಿಧ ಹೋಮ,ಅಭಿಷೇಕಗಳು ಸಂಪನ್ನ
ಬಂಟ್ಚಾಳ: ತಾಲೂಕಿನ ನಾವೂರು ಶ್ರೀ ಗೋಪಾಲಕೃಷ್ಣ ದೇವಾಲಯದ ದೇವರ ಉತ್ಸವದ ಪ್ರಯುಕ್ತ ಗುರುವಾರ ವಿವಿಧ ಹೋಮ,ಅಭಿಷೇಕಗಳು ದೇವಳದ ಪ್ರಧಾನ ಅರ್ಚಕರಾದ ವೇ.ಮೂ.ಸುದರ್ಶನ್ ಬಲ್ಲಾಳ್ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

. ನವಕ ಕಲಶ, ಪ್ರಧಾನ ಹೋಮ, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಹನುಮಾನ್ ಗೆ ಹಾಗೂ ಶಿವನಿಗೆ ವಿಶೇಷ ಪೂಜೆ, ನಾಗಬನದಲ್ಲಿ ಆಶ್ಲೇಷ ಬಲಿ,ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಭಜನೆ,ರಾತ್ರಿ ದೇವರಿಗೆ ರಂಗಪೂಜೆ ನೆರವೇರಿದ್ದು,ನೂರಾರು ಸಂಖ್ಯೆಯಲ್ಲಿ ಭಗವದ್ಬಕ್ತರು ಭಾಗವಹಿಸಿದ್ದರು.ಈಸಂದರ್ಭದಲ್ಲಿ ಇಲ್ಲಿನ ಶ್ರೀಗೋಪಾಲಕೃಷ್ಣ ದೇವರನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿದ್ದು,ಭಕ್ತರು ಕಣ್ತುಂಬಿಕೊಂಡರು.