ಬಂಟ್ವಾಳ: ಫರಂಗಿಪೇಟೆ ಶ್ರೀ ಕೊರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ. ಅನುದಾನ

ಬಂಟ್ವಾಳ : ಫರಂಗಿಪೇಟೆ ಶ್ರೀ ಕೊರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ1 ಲಕ್ಷ ರೂ. ಅನುದಾನದ ಡಿ ಡಿ ಯನ್ನು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕರಾಕಿ ಮಮತಾ ಸಂತೋಷ್, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ, ಸಮಿತಿಯ ಸದಸ್ಯರಾದ ಉಮೇಶ್ ಶೆಟ್ಟಿ ಬರ್ಕೆ, ಭರತ್ ಕುಮ್ದೇಲು ಹರಿಕೃಷ್ಣ ಕಡೆಗೋಳಿ, ಪದ್ಮನಾಭ ಗೋವಿನ್ ತೋಟ ಅಶೋಕ್ ,ಜಗದೀಶ್ ಕುಮ್ದೆಲು, ಸೇವಾ ಪ್ರತಿನಿಧಿ ಅಮಿತಾ, ಒಕ್ಕೂಟದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತೇವಕಾಡು ಪದಾಧಿಕಾರಿಗಳಾದ ವಿನುತ ಮತ್ತು ಮೋಹಿನಿ ಇವರು ಉಪಸ್ಥಿತರಿದ್ದರು.