ಕಾವ್ಯ ಸೊರ್ನಾಡು ಮನೆಯಲ್ಲಿ ಗುರುತತ್ವವಾಹಿನಿ 31ನೇ ಮಾಲಿಕೆಯು ಕಾರ್ಯಕ್ರಮ

ಬಂಟ್ವಾಳ: ಮೌನ ಕ್ರಾಂತಿಯ ಮೂಲಕ ಮಾನವ ಕುಲದ ಉದ್ಧಾರ ಮಾಡಿದಂತಹ ಗುರುಗಳು ಮನುಕುಲಕ್ಕೆ ಸಿಕ್ಕಿದ ಪರಮನಿಧಿ,ಗುರುಗಳ ಸಂಘರ್ಷರಹಿತವಾದ ಕ್ರಾಂತಿಯಿಂದ ಸಮಾನತೆಯ ಸ್ವಾತಂತ್ರ್ಯ ದೊರಕಿದೆ ಎಂದು ಪ್ರಶಾಂತ್ ಏರಮಲೆ ತಿಳಿಸಿದರು.ಬಂಟ್ವಾಳ ಯುವವಾಹಿನಿ ಸದಸ್ಯೆ ಕಾವ್ಯ ಸೊರ್ನಾಡು ಇವರ ಮನೆಯಲ್ಲಿ ಬಂಟ್ವಾಳ ಯುವವಾಹಿನಿ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ 31ನೇ ಮಾಲಿಕೆಯು ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿ ಅವರು ಮಾತನಾಡಿದರು.
ಯುವವಾಹಿನಿ ಘಟಕದ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ, ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡ್, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ,ರಾಜೇಶ್ ಸುವರ್ಣ, ಶಿವಾನಂದ ಎಂ, ಅರುಣ್ ಮಹಾಕಾಳಿಬೆಟ್ಟು, ನಾಗೇಶ್ ಪೊನ್ನೊಡಿ, ಸದಸ್ಯರಾದ ಸುಲತಾ ಬಿ.ಸಿರೋಡ್, ನಾಗೇಶ್ ಏಲಬೆ, ಅರ್ಜುನ್ ಅರಳ, ಅಜಯ್ ನರಿಕೊಂಬು,ನಿಕೇಶ್ ಕೊಟ್ಯಾನ್, ಶ್ರವಣ್ ಬಿ.ಸಿರೋಡ್, ಯತೀಶ್ ಬೊಳ್ಳಾಯಿ, ಸಚಿನ್ ಕೊಡ್ಮಾಣ್, ಸದಾನಂದ ಕರ್ಪೆ, ಸುದೀಪ್ ಸಾಲ್ಯಾನ್ ರಾಯಿ, ಮತ್ತಿತರರು ಉಪಸ್ಥಿತರಿದ್ದರು.ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.