Published On: Tue, Feb 4th, 2025

ವಗ್ಗದಲ್ಲಿ ಕುಲಾಲ ಕ್ರೀಡೋತ್ಸವ 

ಬಂಟ್ವಾಳ : ವಗ್ಗ ಕುಲಾಲ ಸಮಾಜ ಸೇವಾ ಸಂಘ ಇದರಾಶ್ರಯದಲ್ಲಿ ಕುಲಾಲ ಕ್ರೀಡೋತ್ಸವ ೨೦೨೫ ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜಿನ‌ಮೈದಾನದಲ್ಲಿ  ನಡೆಯಿತು.

ಸಂಘದ ಸ್ಥಾಪಕ ಗೌರವಾಧ್ಯಕ್ಷರಾದ ಹರಿಯಪ್ಪ ಮೂಲ್ಯ ಸೇರ್ಬೇಟ್ಟು ಇವರು ಕ್ರೀಡೋತ್ಸವವನ್ನು  ಉದ್ಘಾಟಿಸಿ ಶುಭಹಾರೈಸಿದರು. 

 ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳ ದಳಪತಿ ಪ್ರದೀಪ್ ಅತ್ತಾವರ, ವಿದ್ಯುತ್ ಗುತ್ತಿಗೆದಾರ ಸುಂದರ ಮೂಲ್ಯ ಮಾರೈದೊಟ್ಟು, ಅಲಂಪುರಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಕುಲಾಲ್ ಅಲಂಪುರಿ, ಉದ್ಯಮಿ ಜಿತೇಂದ್ರ ಸಾಲ್ಯಾನ್, ನಾವೂರು ಗ್ರಾಮಪಂಚಾಯತ್ ಸದಸ್ಯ ಉಮೇಶ್ ಕುಲಾಲ್ , ಉತ್ಸಾಹಿ ತರುಣ ವ್ರಂದ ಅಧ್ಯಕ್ಷ ಶಿವರಾಮ್ ಸೇರ್ಬೇಟ್ಟು, ಮಹಿಳಾ ಘಟಕಾ ಅಧ್ಯಕ್ಷೆ ಶೋಭಾ ಅಲಂಪುರಿ ಹಾಗೂ ಗೌರವಾಧ್ಯಕ್ಷ ಕೂಸಪ್ಪ ಕುಲಾಲ್, ಪುರುಷೋತ್ತಮ ಕುಲಾಲ್ ಹೆರೊಟ್ಟು  ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಜಯಂತ್ ಬಂಗೇರ ಸ್ವಾಗತಿಸಿದರು. ಇನ್ನೋರ್ವ ಸಂಘಟನಾ ಕಾರ್ಯದರ್ಶಿ ಹರೀಶ್ ಕುಲಾಲ್  ವಂದಿಸಿದರು. ಕೀರ್ತಿ ಕುಲಾಲ್ ಜಾರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಕ ಹರೀಶ್ ಕುಲಾಲ್ ನರಿಕೊಂಬು ಮತ್ತು ಪ್ರವೀಣ್ ಬಸ್ತಿ ಸಹಕರಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter