ಇನ್ಸೆಪ್ಪೈರ್ ಆವಾರ್ಡ್ ೨೦೨೩ – ೨೪
ಬಂಟ್ವಾಳ:ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಯಶ್ವಿತ್ ಕುಲಾಲ್ ಅವರು ೨೦೨೩-೨೪ನೇ ಸಾಲಿನ ‘ಇನ್ಸೆಪ್ಪೈರ್ ಆವಾರ್ಡ್ ೨೦೨೩ – ೨೪ ಪಡೆದಿದ್ದಾನೆ.

ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ಪೈಕಿ ೨೪೫೭ ವಿಜೇತ ವಿದ್ಯಾರ್ಥಿಗಳ ಪಟ್ಟಿಯಲ್ಲಿ ವಿದ್ಯಾರ್ಥಿ ಯಶ್ಚಿತ್ ಕುಲಾಲ್ ಕೂಡ ಒಬ್ಬನಾಗಿದ್ದಾನೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಮತ್ತು ಅಧ್ಯಾಪಕೇತರರು ಅಭಿನಂದನೆ ಸಲ್ಲಿಸಿರುತ್ತಾರೆ.